HEALTH TIPS

ಅಗಲ್ಪಾಡಿ ಶಾಲೆಯಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ತರಬೇತಿ

ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ವಿಭಾಗದ ವತಿಯಿಂದ ಅಗ್ನಿಯಿಂದ ತುರ್ತು ರಕ್ಷಣೆ ಹಾಗೂ ಸ್ವಯಂರಕ್ಷಣೆ ತರಬೇತಿಯನ್ನು ನೀಡಲಾಯಿತು. ಅಧಿಕಾರಿಗಳಾದ ಪ್ರಸಿದ್, ಜಿಪಿನ್ ಹಾಗೂ ಅರುಣ ಪಿ ನಾಯರ್ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿ ವೃಂದಕ್ಕೆ ಒಂದು ದಿನದ ತರಬೇತಿಯನ್ನು ನೀಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಹಾಗೂ ಪ್ರತೀ ತರಗತಿಯ ಪ್ರತಿನಿಧಿಗಳಿರುವ 70 ಮಂದಿ ಸದಸ್ಯರ ವಿಶೇಷ ತಂಡವನ್ನು ರಚಿಸಿ ಪ್ರತ್ಯೇಕ ತರಗತಿಯನ್ನು ನೀಡಲಾಯಿತು. ಅವರು ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಯಿತು.  ಅಗ್ನಿ ಅಪಾಯದ ಪ್ರಾತ್ಯಕ್ಷಿತೆ, ಪ್ರಥಮ ಚಿಕಿತ್ಸೆ, ಫೈಯರ್ ಎಕ್ಸ್ಟೆಂಸಿರ್‍ನ ಉಪಯೋಗ ಇತ್ಯಾದಿಗಳನ್ನು ಶಾಲಾಂಗಣದಲ್ಲಿ ವಿದ್ಯಾರ್ಥಿಗಳ ಅಣಕು ಪ್ರದರ್ಶನದೊಂದಿಗೆ ವಿವರಿಸಲಾಯಿತು. ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ವಿಶ್ವಾಸವನ್ನು ಎಲ್ಲರಲ್ಲೂ ಮೂಡಿಸಿತು. 

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಶುಭಾಶಂಸನೆ ಗೈದರು. ಮುಖ್ಯೋಪಾಧ್ಯಯ ಗಿರೀಶ್ ಎನ್ ಸ್ವಾಗತಿಸಿ, ಹಿರಿಯ ಗೈಡ್ ಅಧ್ಯಾಪಿಕೆ ಶೈಲಜಾ ಸಿಎಚ್ ವಂದಿಸಿದರು. ಅಗ್ನಿ ಸುರಕ್ಷಾ ವಿಭಾಗದ ಶಾಲಾ ಸಂಚಾಲಕ ಅಧ್ಯಾಪಕ ರಾಧಾ ಮಾಧವ ಎ ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries