HEALTH TIPS

ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ

 ಮೈಸೂರು: ಭಾರತದ ಲೆಜೆಂಡ್ ಸಿಂಗರ್, ಹೆಸರಾಂತ ಗಾಯಕಿ ಎಸ್‌ ಜಾನಕಿಯವರು (S ಎಚಿಟಿಚಿಞi) ಇಂದು (11 ಜುಲೈ 2026) ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿಯೂ ಬಹಳಷ್ಟು ಹಾಡನ್ನು ಹಾಡಿದ್ದ ಎಸ್ ಜಾನಕಿಯವರು ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಲ್ಲಿ ಒಂದಾದ ಪದ್ಮಭೂಷಣ ಪಡೆದಿದ್ದಾರೆ ಭಾರತದ ಮೇರು ಗಾಯಕಿ ಎಸ್ ಜಾನಕಿಯವರು.


ಕನ್ನಡದಲ್ಲಿ, ಅದರಲ್ಲೂ ಮುಖ್ಯವಾಗಿ ಕನ್ನಡದ ಮೇರು ನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ ನಾಗ್, ಅನಂತ್‌ ನಾಗ್, ಅಂಬರೀಷ್, ಶಿವರಾಜ್‌ಕುಮಾರ್ ಸೇರಿದಂತೆ ಬಹಳಷ್ಟು ನಟನಟಿಯರ ಸಿನಿಮಾಗಳ ಹಾಡುಗಳಿಗೆ ಎಸ್ ಜಾನಕಿಯವರು ಧ್ವನಿ ನೀಡಿದ್ದಾರೆ.

ಅಪ್ರತಿಮ ಗಾಯಕಿ ಎಸ್‌ ಜಾನಕಿ ಅವರಿಗೆ ವಯೋಸಹಜ ಅನಾರೋಗ್ಯವಿತ್ತು. ಜೊತೆಗೆ ಇತ್ತೀಚೆಗೆ ಕಾಲುಜಾರಿ ಬಿದ್ದು ವ್ಹೀಳ್‌ಚೇರ್‌ನಲ್ಲಿ ಓಡಾಡುವಂತಾಗಿತ್ತು. ಇಂದು ಆಸಪತ್ರೆಯಲ್ಲಿ ಹಿರಿಯ ಗಾಯಕಿ ಎಸ್‌ ಜಾನಕಿಯವರು ನಿಧನರಾಗಿದ್ದಾರೆ.

ನಾಲ್ಕುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ವಿವಿಧ ರಾಜ್ಯ ಪ್ರಶಸ್ತಿಗಳು, ಬಹಳಷ್ಟು ಸಂಘಸಂಸ್ಥೆಗಳ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಗಾಯಕಿ ಎಸ್ ಜಾನಿಯವರು ಇಂದು ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಈ ಮೂಲಕ ಭಾರತದ ಹೆಮ್ಮೆಯ ಹಿನ್ನೆಲೆ ಗಾಯನದ ಹಿರಿಯ ಗಾಯಕರಲ್ಲಿ ಕೊಂಡಿಯಲ್ಲಿ ಮತ್ತೊಂದು ಸಂಗೀತ ರತ್ನ ನಮ್ಮಿಂದ ದೂರವಾಗಿದೆ.

ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಒಡನಾಟ ಇತ್ತು. ಈ ಸಂಗೀತದ ಮುತ್ತು ಇಂದು ನಮ್ಮನ್ನು ಅಗಲಿದ್ದಾರೆ. ಅವರಿಗೆ ಚಿತ್ರರಂಗ ಸೇರಿದಂತೆ ಇಡೀ ದೇಶ ಅಶ್ರುತರ್ಪಣ ನೀಡುತ್ತಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries