ಕುಂಬಳೆ: ಸಂಸ್ಥೆಗೆ ಮಹಿತಿ ನೀಡದೆ ಹಬ್‍ನಿಂದ ಪಶು ಆಹಾರ ಮಾರಾಟ ಮಾಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿರುದ್ಧ ಕುಂಬಳೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎಳಂಬಚ್ಚಿ ನಿವಾಸಿ ಬಿಜು ಪಿ.ಕೆ ಎಂಬಾತನಿಗೆ ಈ ಕೇಸು. ಕುಂಬಳೆ ಕೊಯಿಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಿ.ಎಸ್ ಎಂಬ ಸಂಸ್ಥೆಯ ಹಬ್ ನಿಂದ ತಲಾ 25 ಕಿಲೋದ 1221 ಗೋಣಿ ಚೀಲ ಪಶು ಆಹಾರವನ್ನು 2025 ಆಗಸ್ಟ್ 8 ಮತ್ತು 2026 ಜುಲೈ 14ರ ನಡುವಿನ ಅವಧಿಯಲ್ಲಿ ಸಂಸ್ಥೆಯ ಅರಿವಿಗೆ ಬಾರದೆ ಮಾರಾಟ ಮಾಡಿರುವುದಾಗಿ ಪ್ರಸ್ತುತ ಸಂಸ್ಥೆಯ ಸಿಬ್ಬಂದಿ, ಎರ್ನಾಕುಳಂ ವಡಪ್ಪಳ್ಳಿ ಟೋಲ್ ನಿವಾಸಿ ಜೋಜೋ ಕುಟ್ಟಿ ಜೇಕಬ್ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.

