ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಬಂಧನಕ್ಕೆ ಅವಕಾಶ ಕಲ್ಪಿಸುವ 'ಪಿಐಟಿ-ಎನ್‍ಡಿಪಿಎಸ್' ಕಾಯ್ದೆಯನ್ವಯ ಒಬ್ಬ ಅಭ್ಯಾಸಗತ ಅಪರಾಧಿಯನ್ನು ವಿದ್ಯಾನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಚೆಂಗಳ ಸನಿಹದ ನಾಲ್ಕನೇಮೈಲಿ ನಿವಾಸಿ ಮುಹಮ್ಮದ್ ಅಬೂಬಕ್ಕರ್ ಬಂಧಿತ
ಈತನ ವಿರುದ್ಧ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ವಿದ್ಯಾನಗರ,
ಮೆಲ್ಪರಂಬ ಹಾಗೂ ಆದೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಎನ್‍ಡಿಪಿಎಸ್ ಅನ್ವಯ ಕೇಸು ದಾಖಲಾಗಿತ್ತು. ಇದರೊಂದಿಗೆ, ಕಾಸರಗೋಡು ಜಿಲ್ಲೆಯಲ್ಲಿ ಎನ್‍ಡಿಪಿಎಸ್ ಕಾಯ್ದೆಯನ್ವಯ ಬಂಧನಕ್ಕೊಳಗಾದವರ ಸಂಖ್ಯೆ ಇಪ್ಪತ್ತಕ್ಕೇರಿದೆ.


