ವಾಶಿಂಗ್ಟನ್: ಗಲ್ಫ್ ಪ್ರದೇಶ ಮತ್ತು ಅದರ ಸುತ್ತಮುತ್ತ ನಡೆದ ದಾಳಿಗಳಿಂದ ಹಡಗುಗಳು, ಸರಕುಗಳು ಮತ್ತು ಸಂಬಂಧಿತ ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿಯನ್ನು ಭರಿಸಲು, ಅಮೆರಿಕ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಇರಾನ್‍ನ ತಡೆಹಿಡಿಯಲಾದ ಆಸ್ತಿಯನ್ನು ಬಳಸಿಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತಿಳಿಸಿದ್ದಾರೆ.
`ಅಮೆರಿಕದ ವಶದಲ್ಲಿರುವ ಮತ್ತು ನಿಯಂತ್ರಣದಲ್ಲಿರುವ ಇರಾನ್ ಹಣವನ್ನು ಹಡಗುಗಳು, ಸರಕುಗಳು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳಿಗೆ ಉಂಟಾಗುವ ಎಲ್ಲಾ ರೀತಿಯ ಹಾನಿಗಳನ್ನು ಭರಿಸಲು ಬಳಸಲಾಗುವುದು. ಇದು ನ್ಯಾಯಯುತ ಮತ್ತು ಸಮಾನವಾದ ನಿರ್ಧಾರವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

