HEALTH TIPS

ಕನ್ನೆಪ್ಪಾಡಿ ಪ್ರಯಾಣಿಕರ ಬಹುಕಾಲದ ಕನಸು ನನಸಾಗುವತ್ತ: ಬಸ್ ತಂಗುದಾಣ ನಿರ್ಮಾಣಕ್ಕೆ ಜಂಟಿ ಸ್ಥಳ ಪರಿಶೀಲನೆ

ಬದಿಯಡ್ಕ: ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕ ಭಾಗಕ್ಕೆ ತೆರಳುವ ಬಸ್ ಪ್ರಯಾಣಿಕರ ಅನೇಕ ವರ್ಷಗಳ ಹಳೆಯ ಕನಸೊಂದು ಕೊನೆಗೂ ನನಸಾಗುವ ಲಕ್ಷಣಗಳು ಕಾಣಿಸುತ್ತಿವೆ. ಕನ್ನೆಪ್ಪಾಡಿಯಲ್ಲಿ ನೂತನ ಬಸ್ ತಂಗುದಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೇತೃತ್ವದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಲಾಯಿತು. ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ತಂಗುದಾಣ ನಿರ್ಮಿಸಲು ಉದ್ದೇಶಿತ ಜಾಗವನ್ನು ಪಂಚಾಯಿತಿ ಪದಾಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೋಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿದರು. 


ಪ್ರಯಾಣಿಕರ ಸುದೀರ್ಘ ಬೇಡಿಕೆ:

ಕನ್ನೆಪ್ಪಾಡಿ ಜಂಕ್ಷನ್‍ನಲ್ಲಿ ಮುಂಡಿತ್ತಡ್ಕ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಸರಿಯಾದ ನಿಲ್ದಾಣವಿಲ್ಲದೆ, ಮಳೆ, ಬಿಸಿಲಿಗೆ ರಸ್ತೆ ಬದಿಯಲ್ಲೇ ಅಂಗಡಿಯ ಮುಂಭಾಗದಲ್ಲಿ ಕಾಯಬೇಕಾದ ಅನಿವಾರ್ಯತೆ ಇತ್ತು. ಹಿರಿಯ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಪರಿಸರದಲ್ಲಿ  ಬಸ್ ತಂಗುದಾಣ ನಿರ್ಮಿಸಬೇಕು ಎನ್ನುವುದು ಮುಂಡಿತ್ತಡ್ಕ ಭಾಗದ ಪ್ರಯಾಣಿಕರು, ಸ್ಥಳೀಯರ ಹಲವು ವರ್ಷಗಳ ಪ್ರಮುಖ ಬೇಡಿಕೆಯಾಗಿತ್ತು. 

ಅಧಿಕಾರಿಗಳ ಜಂಟಿ ಭೇಟಿ:

ಸಂಚಾರ ದಟ್ಟಣೆ ಮತ್ತು ತಾಂತ್ರಿಕ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಅಥವಾ ಸುರಕ್ಷತಾ ತೊಡಕುಗಳು ಎದುರಾಗಬಾರದು ಎಂಬ ನಿಟ್ಟಿನಲ್ಲಿ ಈ ಜಂಟಿ ತಪಾಸಣೆ ಆಯೋಜಿಸಲಾಗಿತ್ತು. ಸುರಕ್ಷಿತವಾದ ಜಾಗವನ್ನು ಗುರುತಿಸುವ ಬಗ್ಗೆ ಸಾರಿಗೆ ಇಲಾಖೆ ಮತ್ತು ಪೋಲೀಸ್ ಅಧಿಕಾರಿಗಳು ಪಂಚಾಯಿತಿ ಆಡಳಿತ ಮಂಡಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಸ್ಥಳ ಪರಿಶೀಲನೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ, ಶ್ಯಾಮಪ್ರಸಾದ್ ಮಾನ್ಯ, ಗ್ರಾಮಪಂಚಾಯಿತಿ ಕಾರ್ಯದರ್ಶಿ ಮನೋಜ್ ಕುಮಾರ್, ಆರ್‍ಟಿಒ ಅಧಿಕಾರಿಗಳು, ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಆಟೋ ಚಾಲಕರು ಹಾಗೂ ಪ್ರಮುಖ ಸ್ಥಳೀಯರು ಉಪಸ್ಥಿತರಿದ್ದರು.


ಅಭಿಮತ:

- "ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕ ಭಾಗಕ್ಕೆ ಪ್ರಯಾಣಿಸುವ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಇದಾಗಿತ್ತು. ಮಳೆ-ಬಿಸಿಲಿನಲ್ಲಿ ಪ್ರಯಾಣಿಕರು ಪಡುತ್ತಿದ್ದ ಕಷ್ಟವನ್ನು ಮನಗಂಡು ಪಂಚಾಯಿತಿ ಆಡಳಿತ ಮಂಡಳಿಯು ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡಿದೆ. ಭವಿಷ್ಯದ ರಸ್ತೆ ವಿಸ್ತರಣೆ ಮತ್ತು ಸಂಚಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‍ಟಿಒ ಹಾಗೂ ಪೋಲೀಸ್ ಅಧಿಕಾರಿಗಳ ಜೊತೆ ಜಂಟಿ ಪರಿಶೀಲನೆ ನಡೆಸಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಶೀಘ್ರವಾಗಿ ಮುಗಿಸಲಾಗುವುದು.

- ಶಂಕರ.ಡಿ., ಅಧ್ಯಕ್ಷರು ಬದಿಯಡ್ಕ ಗ್ರಾಮಪಂಚಾಯಿತಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries