HEALTH TIPS

ಬದಿಯಡ್ಕ ಗ್ರಾಮಪಂಚಾಯಿತಿ ಜೀವನಂ 2 ಅಭಿಯಾನ

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಮಾದರಿ ಸಿಡಿಎಸ್‍ನ ಪಶುಸಂಗೋಪನೆ ಚಟುವಟಿಕೆಗಳ ಭಾಗವಾಗಿ, ಕ್ಲಸ್ಟರ್ ಸದಸ್ಯರಿಗಾಗಿ ಜೀವನಂ 2 ಅಭಿಯಾನವನ್ನು ನಡೆಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡಿ, ಸಾಕುಪ್ರಾಣಿಗಳಾದ ಜಾನುವಾರುಗಳಿಗೆ ಯಾವುದೇ ರೋಗ ಬಾರದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. 


ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಪಶುವೈದ್ಯೆ ಡಾ. ಗೋಪಿಕಾ ಜಾನುವಾರು ರೋಗಗಳ ಕುರಿತು ಜಾಗೃತಿ ತರಗತಿಯನ್ನು ನಡೆಸಿದರು. ವೈದ್ಯಾಕಾರಿ ಡಾ. ಸರಿತಾ ಪ್ರಾಣಿಜನ್ಯ ರೋಗಗಳ ಕುರಿತು ಮಾತನಾಡಿದರು. ಜನಪ್ರತಿನಿಧಿಗಳಾದ ಉಷಾ ಪಳ್ಳತ್ತಡ್ಕ ಮತ್ತು ಬಿಂದ್ಯಾ ನೀರ್ಚಾಲು, ಸಾಜಿ, ನಸೀರಾ ಶುಭ ಹಾರೈಸಿದರು. ಅಭಿಯಾನದ ಭಾಗವಾಗಿ, ರೈತರಿಗೆ ಜಂತುಹುಳು ನಿವಾರಣಾ ಮಾತ್ರೆಗಳು, ಖನಿಜ ಮಿಶ್ರಣ ಮತ್ತು ಕ್ಯಾಲ್ಸಿಯಂ ದ್ರಾವಣ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸದಸ್ಯರು, ಸಿಡಿಎಸ್ ಸದಸ್ಯರು, ಸಿಡಿಎಸ್ ಸದಸ್ಯರು, ಕುಂಬಳೆ, ಚೆಂಗಳ, ಚೆಮ್ಮನಾಡ್, ಮೊಗ್ರಾಲ್ ಪುತ್ತೂರು ಮತ್ತು ಬದಿಯಡ್ಕ ಸಿಡಿಎಸ್‍ಗಳ ಎಎಚ್ ಸಿಆರ್‍ಪಿಗಳು ಭಾಗವಹಿಸಿದ್ದರು. ಸಿಡಿಎಸ್ ಅಧ್ಯಕ್ಷೆ ಸುಲೋಚನಾ ಸ್ವಾಗತಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries