ಪೆರ್ಲ: ಎಣ್ಮಕಜೆ ಗ್ರಾಮಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ "ವರ್ಷ ಋತು ಸಂಭ್ರಮ" ಪೆರ್ಲ ಬಯಲಿನ ಗದ್ದೆಯಲ್ಲಿ ಭಾನುವಾರ ನೆರವೇರಿತು. ಎಣ್ಮಕಜೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಬಿ. ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮುಗರು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ ಜೆ.ಎಸ್, ಕುಟುಂಬಶ್ರೀ ಮಿಷನ್ ಕಾಸರಗೋಡು ಎಡಿಡಬ್ಲ್ಯೂಸಿ ಹರಿದಾಸ್ ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್. ಗಾಂಭೀರ್, ಸಿಡಿಎಸ್ ಮೆಂಬರ್ ಸೆಕ್ರಟರಿ ಗಿರೀಶ್.ಟಿ, ಪಂಚಾಯಿತಿ ಸದಸ್ಯರಾದ ರಾಮಚಂದ್ರ ಎಂ, ಆಯಿಷಾ ಎ.ಎ,ರಾಬಿಯ,ನಿವೃತ್ತ ಉಪನೊಂದಾವಣಾಧಿಕಾರಿ ಮುಹಮ್ಮದಾಲಿ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಬೇಸಾಯಗಾರ, ಪೆರ್ಲ ಬೀಡಿನ ವಾಸು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಶಿಕಲಾ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಎಣ್ಮಕಜೆ ಗ್ರಾ.ಪ.ಕಚೇರಿಯ ಸಿಡಿಎಸ್‍ನಿಂದ ಪೆರ್ಲ ಪೇಟೆಯ ಮೂಲಕ ಪೆರ್ಲ ಬಯಲಿಗೆ ಮೆರವಣಿಗೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತೆಯರು ಸಾಗಿ ಬಂದರು.
ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ ಸ್ವಾಗತಿಸಿದರು. ಶಶಿಕಲಾ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು. ಜೀವನೋಪಾಯ ಉಪ ಸಮಿತಿಯ ಗಿರಿಜಾ ಬಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕೆಸರುಗದ್ದೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆ ನಡೆಯಿತು.



