HEALTH TIPS

ಬ್ಯಾಂಕ್‌ಗಳ ಎನ್‌ಪಿಎ ಇಳಿಕೆ

 ನವದೆಹಲಿ (PTI): ಸರ್ಕಾರಿ ಹಾಗೂ ಖಾಸಗಿ ವಲಯದ ಕೆಲವು ಪ್ರಮುಖ ಬ್ಯಾಂಕ್‌ಗಳು ಜೂನ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಶನಿವಾರ ಪ್ರಕಟಿಸಿದ್ದು, ಬಹುತೇಕ ಬ್ಯಾಂಕ್‌ಗಳ ವಸೂಲಾಗದ ಸಾಲದ ನಿವ್ವಳ ಪ್ರಮಾಣ (ನಿವ್ವಳ ಎನ್‌ಪಿಎ) ಇಳಿಕೆ ಆಗಿದೆ.

ಫಲಿತಾಂಶ ಪ್ರಕಟಿಸಿರುವ ಬಹುತೇಕ ಬ್ಯಾಂಕ್‌ಗಳ ಲಾಭದ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ. 


ಪಂಜಾಬ್ ನ್ಯಾಷನಲ್ ಬ್ಯಾಂಕ್: ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಜೂನ್ ತ್ರೈಮಾಸಿಕದಲ್ಲಿ ₹5,253 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹1,675 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ಶನಿವಾರ ತಿಳಿಸಿದೆ.

ಬ್ಯಾಂಕ್‌ನ ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಎನ್‌ಎನ್‌ಪಿಎ) ಶೇ 0.38ರಿಂದ ಶೇ 0.26ಕ್ಕೆ ಇಳಿದಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್: ದೇಶದ ಖಾಸಗಿ ವಲಯದಲ್ಲಿ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭದಲ್ಲಿ ಶೇ 5ರಷ್ಟು ಹೆಚ್ಚಳವಾಗಿದ್ದು, ₹19,060 ಕೋಟಿ ಲಾಭ ಗಳಿಸಿದೆ. ಬ್ಯಾಂಕ್‌ನ ಎನ್‌ಪಿಎ ಶೇ 0.47ರಿಂದ ಶೇ 0.41ಕ್ಕೆ ಇಳಿದಿದೆ.

ಯೆಸ್‌ ಬ್ಯಾಂಕ್: ಯೆಸ್‌ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 32ರಷ್ಟು ಏರಿಕೆಯಾಗಿದ್ದು, ₹1,071 ಕೋಟಿ ಗಳಿಸಿದೆ. ಎನ್‌ಪಿಎ ಪ್ರಮಾಣವು ಶೇ 0.3ರಿಂದ ಶೇ 0.2ಕ್ಕೆ ಇಳಿದಿದೆ.

ಐಡಿಬಿಐ ಬ್ಯಾಂಕ್‌: ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಐಡಿಬಿಐ ಬ್ಯಾಂಕ್ ₹2,007 ಕೋಟಿ ಲಾಭ ಗಳಿಸಿತ್ತು. ಇದು ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹2,115 ಕೋಟಿಗೆ ತಲುಪಿದ್ದು, ಶೇ 5ರಷ್ಟು ಹೆಚ್ಚಳವಾಗಿದೆ. ನಿವ್ವಳ ಎನ್‌ಪಿಎ ಶೇ 0.21ರಿಂದ ಶೇ 0.16ಕ್ಕೆ ತಗ್ಗಿದೆ.

ಎಕ್ಸಿಸ್ ಬ್ಯಾಂಕ್: ಎಕ್ಸಿಸ್ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 22ರಷ್ಟು ಏರಿಕೆಯಾಗಿದ್ದು, ₹7,632 ಕೋಟಿ ಗಳಿಸಿದೆ. ನಿವ್ವಳ ಎನ್‌ಪಿಎ ಶೇ 0.45ರಿಂದ ಶೇ 0.39ಕ್ಕೆ ಇಳಿದಿದೆ.

ಕೋಟಕ್ ಮಹೀಂದ್ರ ಬ್ಯಾಂಕ್: ಕೋಟಕ್‌ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭವು ₹4,472 ಕೋಟಿಯಿಂದ ₹5,480 ಕೋಟಿಗೆ ಹೆಚ್ಚಳವಾಗಿದ್ದು, ಶೇ 22ರಷ್ಟು ಏರಿಕೆಯಾಗಿದೆ. ನಿವ್ವಳ ಎನ್‌ಪಿಎ ಶೇ 0.34ರಿಂದ ಶೇ 0.27ಕ್ಕೆ ಇಳಿದಿದೆ.

ಐಸಿಐಸಿಐ ಬ್ಯಾಂಕ್: ಐಸಿಐಸಿಐನ ಬ್ಯಾಂಕ್‌ನ ಲಾಭದಲ್ಲಿ ಶೇ 13ರಷ್ಟು ಹೆಚ್ಚಳವಾಗಿದ್ದು, ₹15,440 ಕೋಟಿ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಜೂನ್ ತ್ರೈಮಾಸಿಕದಲ್ಲಿ ₹13,558 ಕೋಟಿ ಗಳಿಸಿತ್ತು. ನಿವ್ವಳ ಎನ್‌ಪಿಎ ಶೇ 0.37ರಿಂದ ಶೇ 0.35ಕ್ಕೆ ಇಳಿದಿದೆ. 


ಪ್ರಸಕ್ತ ವರ್ಷದ ಸೆಪ್ಟೆಂಬರ್ 30ರ ವೇಳೆಗೆ ಎಫ್‌ಸಿಎನ್‌ಆರ್‌-ಬಿ ಠೇವಣಿ ಮೂಲಕ ₹24 ಸಾವಿರ ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ

-ಅಶೋಕ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ಎಕ್ಸಿಸ್ ಬ್ಯಾಂಕ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries