HEALTH TIPS

ಬಾಯಾರು: ಗುಡ್ಡ ಕುಸಿದು ಬಿದ್ದು ಸಂಚಾರಕ್ಕೆ ಅಡಚಣೆ

ಉಪ್ಪಳ: ಗುಡ್ಡ ಕುಸಿದು ಬಿದ್ದು ರಸ್ತೆಯಲ್ಲಿ ಸಂಚಾರ ಮೊಟಕುಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತಿಯ ಧರ್ಮತ್ತಡ್ಕ-ಕನಿಯಾಲ ಕಂಪದಮೂಲೆ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಪರಿಸರದಲ್ಲಿ ಗುಡ್ಡೆ ಸಹಿತ ಮರಗಳು ಹಾಗೂ ಗದ್ದೆ ಬದಿಯ ಮಣ್ಣು ಸೋಮವಾರ ಮಧ್ಯಾಹ್ನ ಕುಸಿದು ರಸ್ತೆಗೆ ಬಿದ್ದಿದೆ. ಈ ವೇಳೆ ವಾಹನ ಹಾಗೂ ಜನರ ಸಂಚಾರ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ರಸ್ತೆಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. 


ಘಟನಾ ಸ್ಥಳಕ್ಕೆ ಪಂಚಾಯತಿ ಕಾರ್ಯದರ್ಶಿ, ಪೈವಳಿಕೆ ಪಂಚಾಯತಿ ಸದಸ್ಯರಾದ ಗಣೇಶ್ ನಾಯ್ಕ್, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಹಿರಿಯರಾದ ಬಿ.ಕೆ ಬಲ್ಲಾಳ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಪಂಚಾಯತಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries