HEALTH TIPS

ಐಲ ಮೈದಾನವನ್ನು ಯಾವುದೇ ಕಾರಣಕ್ಕೂ ಇತರ ಉಪಯೋಗಕ್ಕೆ ಬಿಟ್ಟುಕೊಡಲಾಗದು: ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ

ಉಪ್ಪಳ: ಹಿಂದೂಗಳ ಶ್ರದ್ಧಾ ಕೇಂದ್ರವಾಗಿ ದಿನನಿತ್ಯವೂ ಸಾವಿರಾರು ಭಕ್ತರು ಆಗಮಿಸಿ ದೇವಿಯ ಅನುಗ್ರಹ ಪಡೆಯುವ ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾಗಿದೆ. ಅನಾದಿ ಕಾಲದಿಂದಲೂ ಕ್ಷೇತ್ರದ ಮುಂಭಾಗದ ಐಲ ಮೈದಾನದಲ್ಲಿ ಉತ್ಸವ ನಡೆಯುತ್ತಿದೆ. ಬೆಡಿಕಟ್ಟೆ ಹಾಗೂ ಅಷ್ಟ ದಿಕ್ಪಾಲಕರ ಕಟ್ಟೆಯು ಇಲ್ಲಿದ್ದು ಪೂಜೆ, ಧಾರ್ಮಿಕ ವಿಧಿಗಳು ಪ್ರತಿ ತಿಂಗಳು ನೆರವೇರುತ್ತಿದೆ. ಸಾರ್ವಜನಿಕ ಮೊಸರು ಕುಡಿಕೆಯು ಐಲ ಮೈದಾನದಲ್ಲಿ ಹಲವಾರು ದಶಕಗಳಿಂದ ನಡೆಯುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಊರು ಪರವೂರುಗಳಿಂದ ಆಗಮಿಸುತ್ತಿದ್ದಾರೆ. ಐಲ ಮೈದಾನವು ಕ್ಷೇತ್ರದ ಉತ್ಸವ ನಡೆಯುವ ಸ್ಥಳ. ಇದನ್ನು ಯಾವುದೇ ಕಾರಣಕ್ಕೂ ಇತರ ಉಪಯೋಗಕ್ಕೆ ಬಿಟ್ಟು ಕೊಡಲಾಗದು ಎಂದು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಗೌರವ ಅಧ್ಯಕ್ಷ ಸದಾಶಿವ ಐಲ, ಅಧ್ಯಕ್ಷ ಜಯೇಂದ್ರ ಐಲ, ಪದಾಧಿಕಾರಿಗಳಾದ ವೇದಪ್ರಕಾಶ್ ಐಲ, ಮಧುಸೂದನ್ ಕೋಲಾರಗುಡ್ಡೆ, ಲೋಕೇಶ್ ಐಲ, ಸಂತೋಷ್ ಕೋಲಾರಗುಡ್ಡೆ, ಪದ್ಮನಾಭ ಸಾಲಿಯಾನ್, ಸುಂದರ ಐಲ, ಸುರೇಶ ಐಲ, ಇತರ ಸದಸ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಶರ್ಮ ಸ್ವಾಗತಿಸಿ, ಸಂದೇಶ್ ಐಲ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries