ಪೆರ್ಲ: ಕಾಟುಕುಕ್ಕೆ ಬಾಲಪ್ರಭಾ ಎ.ಯು.ಪಿ. ಶಾಲೆ 2026-27ನೇ ಶೈಕ್ಷಣಿಕ ವರ್ಷದ ವಾರ್ಷಿಕ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜರುಗಿತು. ಶಾಲಾ ರಕ್ಷಕ ಶೀಕ್ಷಕ ಸಂಘದ ಅಧ್ಯಕ್ಷ ಶಂಕರ ಬನಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಶಾಲಾ ರಕ್ಷಕ ಶಿಕ್ಷಕ ಸಂಘ ಮತ್ತು ಮತೃ ಸಂಘದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರವೀಣ್ ಮುಂಡಾಜೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಗೂ ಸವಿತಾ ಅವರು ಮಾತೃ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಈ ಸಂದರ್ಭ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪುಸ್ತಕದ ಓದು ಕಾರ್ಯಕ್ರಮದನ್ವಯ ತಾವು ಓದಿದ ಪುಸ್ತಕಗಳ ಅನುಭವ ಹಾಗೂ ಅಭಿಪ್ರಾಯಗಳನ್ನು ದಾಖಲಿಸಿದ 'ನಾನು ಓದಿದ ಪುಸ್ತಕ'ಎಂಬ ಟಿಪ್ಪಣಿ ಒಳಗೊಂಡ ಸಂಕಲನವನ್ನು ಪಿಟಿಎ ನಿಕಟಪೂರ್ವ ಅಧ್ಯಕ್ಷ ಶಂಕರ ಬನಾರಿ ಅನಾವರಣಗೊಳಿಸಿದರು.
ಶಿಕ್ಷಕಿ ಪವಿತ್ರ ಸ್ವಾಗತಿಸಿದರು. ಪ್ರದೀಪ್ ಎಡನೀರು ಅವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕ ವಿಕ್ಟರ್ ಡಿ'ಸೋಜಾ ವಂದಿಸಿದರು.



