HEALTH TIPS

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ: ದೆಹಲಿ ಸರ್ಕಾರದಿಂದ ಪೋರ್ಟಲ್ ಶೀಘ್ರ

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ (ಇ.ವಿ) ನೀತಿ-2026ರ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ನೀಡಲು ದೆಹಲಿ ಸರ್ಕಾರ ಇನ್ನು ನಾಲ್ಕೈದು ದಿನಗಳಲ್ಲಿ ಹೊಸ ಆನ್‌ಲೈನ್ ಪೋರ್ಟಲ್ ಆರಂಭಿಸಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ವ್ಯವಸ್ಥೆಯಡಿ ಅರ್ಹ ಅರ್ಜಿದಾರರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕವೇ ಸಬ್ಸಿಡಿ ಹಣ ಜಮೆಯಾಗಲಿದೆ.

30 ದಿನಗಳ ಮಿತಿ: ವಾಹನ ಖರೀದಿಸಿದ ನಂತರ ಆರ್‌ಸಿ (ನೋಂದಣಿ ಪತ್ರ) ಬಂದ 30 ದಿನಗಳ ಒಳಗಾಗಿ ಖರೀದಿದಾರರು ಈ ಪೋರ್ಟಲ್‌ನಲ್ಲಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬೇಕು.

ಅಗತ್ಯ ದಾಖಲೆಗಳು:

ಸಬ್ಸಿಡಿ ಪಡೆಯಲು ಡೀಲರ್ ನೀಡಿದ ಖರೀದಿ ಪ್ರಮಾಣಪತ್ರ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಹಳೆಯ ವಾಹನವನ್ನು ಗುಜರಿಗೆ ಹಾಕಿ ಹೊಸ ಇವಿ ಕೊಳ್ಳುವವರಾಗಿದ್ದರೆ, ಅಧಿಕೃತ ಸ್ಕ್ರಾಪಿಂಗ್ ಕೇಂದ್ರದ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಯಾರಿಗೆ ಅನ್ವಯ?:

ಈ ಸಬ್ಸಿಡಿ ಯೋಜನೆಯು ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ ವಾಹನಗಳು ಮತ್ತು ಎನ್‌1 ಸರಕು ಸಾಗಣೆ ಟ್ರಕ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ಕಾರು ಖರೀದಿದಾರರಿಗೆ ವಿನಾಯಿತಿ:

ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಯಾವುದೇ ಸಬ್ಸಿಡಿ ಇಲ್ಲದ ಕಾರಣ ಅವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಅವರಿಗೆ ಸಿಗುವ ರೋಡ್ ಟ್ಯಾಕ್ಸ್ ಮತ್ತು ನೋಂದಣಿ ಶುಲ್ಕದ ವಿನಾಯಿತಿಗಳು ವಾಹನ ನೋಂದಣಿ ಸಮಯದಲ್ಲಿಯೇ ಅನ್ವಯವಾಗಲಿವೆ.

ಮುಂದಿನ ದಿನಗಳಲ್ಲಿ ಈ ಪೋರ್ಟಲ್‌ನಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸಮಯದ ಮಾಹಿತಿ ಹಾಗೂ ಅಧಿಕೃತ ಸ್ಕ್ರಾಪಿಂಗ್ ಡೀಲರ್‌ಗಳ ಸಂಪರ್ಕ ಸಂಖ್ಯೆಗಳೂ ಸಿಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries