HEALTH TIPS

"ವಾಹನಗಳ ಎಂಜಿನ್‌ಗೆ ಹಾನಿಯಿಲ್ಲ, ಆದರೆ ಮೈಲೇಜ್ ಇಳಿಕೆಯಾಗಬಹುದು" : E20 ಮಿಶ್ರಿತ ಪೆಟ್ರೋಲ್ ಕುರಿತ ಚರ್ಚೆ ಮಧ್ಯೆ ವಾಹನ ಕಂಪೆನಿಗಳಿಂದ ಸ್ಪಷ್ಟನೆ

ನವದೆಹಲಿ: ಪೆಟ್ರೋಲ್‌ನಲ್ಲಿ ಕಡ್ಡಾಯವಾಗಿ ಶೇ.20ರಷ್ಟು ಎಥೆನಾಲ್ (E20) ಮಿಶ್ರಣ ಮಾಡುವ ಸರಕಾರದ ನಿರ್ಧಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ವಾಹನ ತಯಾರಕ ಕಂಪೆನಿಗಳು E20 ಪೆಟ್ರೋಲ್‌ನಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಹೇಳಿದೆ.

ಆದರೆ, 2023ಕ್ಕೂ ಮೊದಲು ತಯಾರಾದ ವಾಹನಗಳಲ್ಲಿ ಮೈಲೇಜ್ ಶೇ.3ರಿಂದ 3.5ರಷ್ಟು ಕಡಿಮೆಯಾಗಬಹುದು ಎಂಬುದನ್ನು ಒಪ್ಪಿಕೊಂಡಿದೆ.

ವಾಹನ ತಯಾರಿಕಾ ಕಂಪೆನಿಗಳ ಪ್ರಕಾರ, E20 ಪೆಟ್ರೋಲ್‌ನಲ್ಲಿ ಕ್ಯಾಲೊರಿಫಿಕ್ ಮೌಲ್ಯ (ಶಾಖ ಉತ್ಪಾದನಾ ಸಾಮರ್ಥ್ಯ) ಸಾಮಾನ್ಯ ಪೆಟ್ರೋಲ್‌ಗಿಂತ ಕಡಿಮೆ ಇರುವುದರಿಂದ ಮೈಲೇಜ್‌ನಲ್ಲಿ ಸ್ವಲ್ಪ ಇಳಿಕೆ ಕಂಡುಬರುತ್ತದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, E20 ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೀಕೆಗಳ ಹಿನ್ನೆಲೆ ಕೇಂದ್ರ ಸರಕಾರ ಶುಕ್ರವಾರ ವಾಹನ ತಯಾರಕ ಕಂಪೆನಿಗಳು ಹಾಗೂ ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಸಭೆ ನಡೆಸಿದೆ.

ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ (E20) ಮಿಶ್ರಣದ ಬಗ್ಗೆ ವ್ಯಕ್ತವಾಗಿರುವ ಆತಂಕಗಳನ್ನು ನಿವಾರಿಸುವ ಉದ್ದೇಶದಿಂದ, ಮಾರುತಿ ಸುಝುಕಿ ಇಂಡಿಯಾ, ಟೊಯೋಟಾ ಕಿರ್ಲೋಸ್ಕರ್, ಬಜಾಜ್ ಆಟೋ, ಟಿವಿಎಸ್ ಮೋಟರ್, ಹ್ಯುಂಡೈ ಮೋಟರ್ ಇಂಡಿಯಾ ಹಾಗೂ ಹೀರೋ ಮೋಟೋಕಾರ್ಪ್ ಕಂಪೆನಿಯ ಹಿರಿಯ ಅಧಿಕಾರಿಗಳು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾರುತಿ ಸುಝುಕಿ ಇಂಡಿಯಾದ ರಾಹುಲ್ ಭಾರ್ತಿ, 2025-26ರಲ್ಲಿ ಕಂಪೆನಿಯು 2.8 ಕೋಟಿ ಕಾರುಗಳಿಗೆ ಸರ್ವಿಸ್ ನೀಡಿದ್ದು, ಅವುಗಳಲ್ಲಿ 1.5 ಕೋಟಿ ಕಾರುಗಳು ಮೂರು ವರ್ಷಕ್ಕಿಂತ ಹಳೆಯದಾಗಿದೆ. ಅಂದರೆ, ಅವು E20 ಕುರಿತು ಪ್ರಮಾಣೀಕರಣ ಪಡೆಯದ ವಾಹನಗಳಾಗಿದೆ. ಈ ವಾಹನಗಳಲ್ಲಿ E20 ಇಂಧನ ಬಳಕೆಯಿಂದ ಯಾವುದೇ ಆತಂಕಕಾರಿ ಸಮಸ್ಯೆ ಕಂಡುಬಂದಿಲ್ಲ. ನಮ್ಮ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಗಳಷ್ಟೇ ಅಲ್ಲ, ರಸ್ತೆ ಬಳಕೆಯ ಅನುಭವವೂ ಉತ್ತಮವಾಗಿದೆ. ಅದಕ್ಕಾಗಿಯೇ ಗ್ರಾಹಕರಿಗೆ E20 ಬಳಕೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇವೆ," ಎಂದು ರಾಹುಲ್ ಭಾರ್ತಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries