ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸಿ ಯಶಸ್ವಿಯಾಗಿತ್ತು. ಇದೀಗ ವಾಹನ ಮಾಲಕರಿಗೆ ಶೇ. 100ರಷ್ಟು ಶುದ್ಧ ಪೆಟ್ರೋಲ್ ಖರೀದಿಸುವ ಆಯ್ಕೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ಇ20 ಜನತಾ ಪಾರ್ಟಿ ಉದಯವಾಗಿದೆ.
ಈ ಪಕ್ಷದ ಬೇಡಿಕೆ ಸರಳವಾಗಿದೆ. ವಾಹನ ಮಾಲಕರಿಗೆ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವ ಶೇ. 20ರಷ್ಟು ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬದಲು, ಶೇ. 100ರಷ್ಟು ಶುದ್ಧ ಪೆಟ್ರೋಲ್ ಆಯ್ಕೆಯ ಅವಕಾಶವನ್ನು ನೀಡಬೇಕು ಎಂಬುದು ಈ ಬೇಡಿಕೆಯಾಗಿದೆ.
ಇ20 ಪೆಟ್ರೋಲ್ ಬಳಕೆಯಿಂದ ತಮ್ಮ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಹಾಗೂ ಇಂಜಿನ್ ಹಾಳಾಗುತ್ತಿದೆ ಎಂಬ ಗ್ರಾಹಕರ ಕಳವಳವನ್ನೇ ದೊಡ್ಡ ಹೋರಾಟವನ್ನಾಗಿ ರೂಪಿಸುವತ್ತ ಈ ಪಕ್ಷ ಮುಂದಡಿ ಇಟ್ಟಿದೆ. ಈ ರಾಜಕೀಯ ಪಕ್ಷ ಸರ್ಕಾರವನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ನಿರೀಕ್ಷಿಸಲಾಗಿದೆ.

