ತಿರುವನಂತಪುರಂ: ವಿಝಿಂಜಂ ಬಂದರಿನಲ್ಲಿ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿ (ಒSಅ) ಜತೆ ಅದಾನಿ ಪೋರ್ಟ್ಸ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಾಗ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ಈ ಬೆಳವಣಿಗೆಯ ಬಗ್ಗೆ ಅಂದಿನ ಐಆಈ ಸರ್ಕಾರಕ್ಕೆ ಮೊದಲೇ ಮಾಹಿತಿ ಇತ್ತು ಎಂದು ಬುಧವಾರ ಆರೋಪಿಸಿದರು.
ಈ ಆರೋಪವನ್ನು ಐಆಈ ತಳ್ಳಿಹಾಕಿದ್ದು, ಮುಖ್ಯಮಂತ್ರಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಅದಾನಿ ಪೋರ್ಟ್ಸ್ ಲಿಮಿಟೆಡ್ ಹಾಗೂ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿಯ ನಡುವಿನ ಒಪ್ಪಂದದ ಕುರಿತು ಜೂ. 5ರಂದು ಸಿಪಿಎಂ ಮುಖವಾಣಿ ʼದೇಶಾಭಿಮಾನಿʼ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು ಎಂದು ಹೇಳಿದರು.
ಒಂದು ತಿಂಗಳ ಹಿಂದೆಯೇ ಪ್ರಕಟವಾಗಿದ್ದ ಆ ವರದಿಯನ್ನು ಉಲ್ಲೇಖಿಸಿದ ಅವರು, ʼದೇಶಾಭಿಮಾನಿʼ ಪತ್ರಿಕೆಯಲ್ಲಿ ಪ್ರಕಟವಾದ ಸಂಭಾವ್ಯ ಒಪ್ಪಂದದ ಸುದ್ದಿಗೆ ಐಆಈ ಸರ್ಕಾರವೇ ಮಾಹಿತಿ ಮೂಲವಾಗಿತ್ತು ಎಂದು ಆರೋಪಿಸಿದರು.
"ಈ ಸುದ್ದಿ ಹೇಗೆ ಹೊರಬಂತು? ಅದರ ಮೂಲ ಯಾವುದು? ಐಆಈ ಸರ್ಕಾರ ಆಯೋಜಿಸಿದ್ದ ಕಾನ್ಕ್ಲೇವ್ನಲ್ಲಿ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿಯ ಪ್ರತಿನಿಧಿಗಳೂ ಭಾಗವಹಿಸಿದ್ದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ" ಎಂದು ಪ್ರಶ್ನಿಸಿದರು.
ಯುಡಿಎಫ್ ಸರ್ಕಾರ ವಿಝಿಂಜಂ ಬಂದರಿಗೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡುವುದಕ್ಕೂ ಮುನ್ನವೇ ಈ ವರದಿ ಪ್ರಕಟವಾಗಿತ್ತು. ಈ ಬೆಳವಣಿಗೆಗಳ ಬಗ್ಗೆ ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ ಬಳಿಕವೇ ಅದಾನಿ ಪೋರ್ಟ್ಸ್ ಲಿಮಿಟೆಡ್ ಒಪ್ಪಂದಕ್ಕೆ ಅನುಮೋದನೆ ಕೋರಿ ಪತ್ರ ಸಲ್ಲಿಸಿದೆ ಎಂದು ತಿಳಿಸಿದರು.
ಒಪ್ಪಂದಕ್ಕೆ ಅನುಮತಿ ಕೋರಿ ಅದಾನಿ ಪೋರ್ಟ್ಸ್ ಲಿಮಿಟೆಡ್ ಕಳುಹಿಸಿರುವ ಪತ್ರದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಒಪ್ಪಂದದ ಕುರಿತು ಸಮಗ್ರ ಪರಿಶೀಲನೆ ನಡೆಸಿ, ರಾಜ್ಯದ ಹಿತಾಸಕ್ತಿಯನ್ನು ಪರಿಗಣಿಸಿದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯವರ ಹೇಳಿಕೆಗೆ ತಿರುಗೇಟು ನೀಡಿದ ಐಆಈ ನಾಯಕ ಹಾಗೂ ಮಾಜಿ ಸಚಿವ ಪಿ. ರಾಜೀವ್, ಅದಾನಿ ಮತ್ತು ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿಗಳ ನಡುವಿನ ಒಪ್ಪಂದದ ಕುರಿತು ವರದಿ ಪ್ರಕಟಿಸಿದ ಮೊದಲ ಪತ್ರಿಕೆ ʼದೇಶಾಭಿಮಾನಿ ʼಮಾತ್ರವಲ್ಲ ಎಂದು ಹೇಳಿದರು.
ಉಭಯ ಕಂಪೆನಿಗಳ ನಡುವೆ ಮಾತುಕತೆ ನಡೆದಿದ್ದೇ ಮುಖ್ಯ ವಿಷಯವಲ್ಲ. ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸರ್ಕಾರದ ಪೂರ್ವಾನುಮತಿ ಪಡೆಯಲಾಗಿತ್ತೇ ಎಂಬುದೇ ಪ್ರಮುಖ ಪ್ರಶ್ನೆ ಎಂದು ಅವರು ಹೇಳಿದರು.
ಅದಾನಿ ಪೋರ್ಟ್ಸ್ ಲಿಮಿಟೆಡ್ ಸೆಬಿಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಜೂನ್ 29ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜನರ ಗಮನವನ್ನು ಜ್ವಲಂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ನಡುವೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದು, ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿಗೆ ಅದಾನಿ ಪೋರ್ಟ್ಸ್ ಲಿಮಿಟೆಡ್ ತನ್ನ ಶೇ. 49ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾವದ ಕುರಿತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ಒಪ್ಪಂದಕ್ಕೆ ಅನುಮತಿ ಕೋರಿ ಅದಾನಿ ಪೋರ್ಟ್ಸ್ ಲಿಮಿಟೆಡ್ ಸರ್ಕಾರಕ್ಕೆ ಯಾವುದೇ ಪತ್ರ ಸಲ್ಲಿಸಿದೆ? ಸಲ್ಲಿಸಿದ್ದರೆ ಅದರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

