HEALTH TIPS

OTP Security: ಫೋನ್‌ಗೆ ಬರೋ 6-ಅಂಕಿಯ OTP ಯಾಕಿಷ್ಟು ಮುಖ್ಯ? ಇದರ ಅಸಲಿ ಕೆಲಸವೇನು?

 ನಾವು ಇಂಟರ್ನೆಟ್ ಬ್ಯಾಂಕಿಂಗ್, ಆನ್‌ಲೈನ್ ಶಾಪಿಂಗ್ ಮಾಡುವಾಗ ಅಥವಾ ಯಾವುದಾದರೂ ಆ್ಯಪ್‌ಗೆ ಲಾಗಿನ್ ಆಗುವಾಗ ಮೊಬೈಲ್‌ಗೆ ಒಂದು OTP ಬರುತ್ತೆ. ಆದರೆ ಈ OTP ಯಾಕೆ ಬರುತ್ತೆ, ಇದರ ಅಸಲಿ ಕೆಲಸವೇನು ಅಂತಾ ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 


OTP ಎಂದರೇನು?

OTP ಅಂದರೆ 'ಒನ್-ಟೈಮ್ ಪಾಸ್‌ವರ್ಡ್' ಎಂದು ಇದರರ್ಥ. ಇದು ಕೆಲವೇ ನಿಮಿಷಗಳ ಕಾಲ ಅಥವಾ ಕೆಲವುಸಲ ಐದರಿಂದ ಒಂಭತ್ತು ಸೆಕೆಂಡ್‌ಗಳ ಕಾಲ ಮಾತ್ರ ಚಾಲ್ತಿಯಲ್ಲಿರುವ ಒಂದು ವಿಶೇಷ ಕೋಡ್. ಸಾಮಾನ್ಯವಾಗಿ ಇದು 4, 6 ಅಥವಾ 8 ಅಂಕಿಗಳನ್ನು ಹೊಂದಿರುತ್ತದೆ ಮತ್ತು SMS, ಇಮೇಲ್ ಅಥವಾ ಆ್ಯಪ್ ಮೂಲಕ ಬರುತ್ತದೆ.

OTP ನಿಮ್ಮ ಗುರುತು ಮತ್ತು ಖಾತೆ ಸುರಕ್ಷಿತವಾಗಿಡುವುದು ಇದರ ಕೆಲಸ

ನಿಮ್ಮ ಗುರುತನ್ನು ಪರಿಶೀಲಿಸುವುದು ಮತ್ತು ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡುವುದು OTPಯ ಮುಖ್ಯ ಉದ್ದೇಶ. ನಿಮ್ಮ ಪಾಸ್‌ವರ್ಡ್ ಯಾರಿಗಾದರೂ ಗೊತ್ತಾದರೂ, OTP ಇಲ್ಲದೆ ಅವರು ಲಾಗಿನ್ ಆಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬ್ಯಾಂಕ್, UPI ಆ್ಯಪ್, ಇ-ಕಾಮರ್ಸ್ ಸೈಟ್‌ಗಳು OTP ಬಳಸುತ್ತವೆ.

OTP ಯಾವಾಗ ಬರುತ್ತೆ?

ಬ್ಯಾಂಕ್ ಲಾಗಿನ್ ಆದಾಗ, ಆನ್‌ಲೈನ್ ಪೇಮೆಂಟ್‌ ಮಾಡುವಾಗ, ಅಥವಾ ಇನ್ನಿತರ ಬ್ಯಾಂಕಿಂಗ್ ಕೆಲಸಗಳಲ್ಲಿ  ಸಿಸ್ಟಮ್ ಒಂದು ವಿಶಿಷ್ಟ OTPಯನ್ನು ನಿಮ್ಮ ನೋಂದಾಯಿತ ಮೊಬೈಲ್ ಅಥವಾ ಇಮೇಲ್‌ಗೆ ಕಳುಹಿಸುತ್ತದೆ. ನೀವು ಸರಿಯಾದ ಔಖಿP ನಮೂದಿಸಿದರೆ ಮಾತ್ರ ಮುಂದಿನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

OTP ಕೆಲವೇ ನಿಮಿಷಗಳ ನಂತರ ನಿಷ್ಕ್ರಿಯಗೊಳ್ಳುವುದು ಏಕೆ?

ಕೆಲವೇ ನಿಮಿಷಗಳ ನಂತರ OTP ನಿಷ್ಕ್ರಿಯವಾಗುತ್ತದೆ. ಯಾಕೆಂದರೆ ಇದು ಭದ್ರತೆಯ ದೃಷ್ಟಿಯಿಂದ ಬಹಳ ಮುಖ್ಯ. OTP ಹೆಚ್ಚು ಕಾಲ ಚಾಲ್ತಿಯಲ್ಲಿದ್ದರೆ, ಬೇರೆಯವರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಹೆಚ್ಚಿನ OTPಗಳು 30 ಸೆಕೆಂಡಿನಿಂದ 10 ನಿಮಿಷಗಳ ಒಳಗೆ ಬಳಕೆಯಾಗಬೇಕು.

OTP: ಈ ಕಾರಣಕ್ಕೆ ಒಟಿಪಿ ಯಾರೊಂದಿಗೂ ಹಂಚಿಕೊಳ್ಳಬಾರದು

ಬ್ಯಾಂಕ್ ಮತ್ತು ಸೈಬರ್ ಭದ್ರತಾ ಏಜೆನ್ಸಿಗಳು OTP ಹಂಚಿಕೊಳ್ಳದಂತೆ ಎಚ್ಚರಿಸುತ್ತವೆ. ನೀವು OTP ಹಂಚಿಕೊಂಡರೆ, ವಂಚಕರು ನಿಮ್ಮ ಬ್ಯಾಂಕ್ ಖಾತೆ, UPI, ಇಮೇಲ್ ಅಥವಾ ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಬಹುದು. ವಂಚಕರು ಬ್ಯಾಂಕ್ ಅಧಿಕಾರಿ, ಪೊಲೀಸ್ ಎಂದು ಹೇಳಿಕೊಂಡು OTP ಕೇಳುತ್ತಾರೆ. ಹುಷಾರಾಗಿರಬೇಕು. ದಿನನಿತ್ಯ ಇಂಥ ವಂಚನೆಗಳು ನಡೆಯುತ್ತಿವೆ, ವಂಚಕರ ಬಲೆಗೆ ಬೀಳದಂತೆ ಜಾಗೃತರಾಗಬೇಕು.

OTP ಒಂದೇ ಸೈಬರ್ ದಾಳಿ ತಡೆಯಲು ಸಾಧ್ಯವಿಲ್ಲ

OTP ಒಂದು ಬಲವಾದ ಭದ್ರತಾ ವ್ಯವಸ್ಥೆ ಅನ್ನೋ ನಿಜವಾದರೂ, ಆದರೆ ಒಟಿಪಿ ಒಂದೇ ಎಲ್ಲ ಸೈಬರ್ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ, ಬಲವಾದ ಪಾಸ್‌ವರ್ಡ್, ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (Two-Factor Authentication) ಇದರ ಜೊತೆಗೆ ಜಾಗೃತಿ ಕೂಡ ಅಷ್ಟೇ ಮುಖ್ಯ.

ಭಾರತದಲ್ಲಿ ಒಟಿಪಿ ಬಳಕೆ ತಿಂಗಳಿಗೆ 50 ಕೋಟಿ!

ಭಾರತದಲ್ಲಿ ಪ್ರತಿ ತಿಂಗಳು 5.5 ಬಿಲಿಯನ್ (550 ಕೋಟಿ) ಗಿಂತ ಹೆಚ್ಚು OTP SMS ಕಳುಹಿಸಲಾಗುತ್ತದೆ. ಭಾರತ ವಿಶ್ವದ ಅತಿದೊಡ್ಡ OTP ಮಾರುಕಟ್ಟೆಯಾಗಿದೆ.

ಭಾರತದ ಸುಮಾರು 90% ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳು SMS OTPಯನ್ನು ಡೀಫಾಲ್ಟ್ ಭದ್ರತಾ ಹಂತವಾಗಿ ಬಳಸುತ್ತವೆ.

ಭಾರತೀಯ ನಿಯೋಬ್ಯಾಂಕ್‌ಗಳು, ಡಿಜಿಟಲ್ ಸಾಲದಾತರು ಮತ್ತು ಫಿನ್‌ಟೆಕ್ ಕಂಪನಿಗಳು ಪ್ರತಿ ತಿಂಗಳು 200 ಕೋಟಿಗೂ ಹೆಚ್ಚು OTP ಕಳುಹಿಸುತ್ತವೆ.

ವರದಿಗಳ ಪ್ರಕಾರ, ಭಾರತದಲ್ಲಿನ ಒಟ್ಟು ಸೈಬರ್ ವಂಚನೆ ಪ್ರಕರಣಗಳಲ್ಲಿ ಕಾಲು ಭಾಗದಷ್ಟು (25% ಕ್ಕಿಂತ ಹೆಚ್ಚು) OTP ಹಗರಣಗಳೇ ಆಗಿವೆ. 






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries