ಕಠ್ಮಂಡು: ಪಾಕಿಸ್ತಾನದ ಬ್ರಾಡ್ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ 10 ಪರ್ವತಾರೋಹಿಗಳು ಕಾಣೆಯಾಗಿದ್ದಾರೆ. ಈ ಪೈಕಿ ನೇಪಾಳದ ನುರಿತ ಪರ್ವತಾರೋಹಿ ನಿರ್ಮಲ್ ಪುರ್ಜಾ ಅವರೂ ಸೇರಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಪಾಕಿಸ್ತಾನದ ಕಾರಕೋರಂ ಶ್ರೇಣಿಯಲ್ಲಿರುವ ಬ್ರಾಡ್ ಶಿಖರವು (8,051 ಮೀಟರ್ ಎತ್ತರ) ಪ್ರಪಂಚದ 12ನೇ ಎತ್ತರದ ಶಿಖರವಾಗಿದೆ.
ಬ್ರಾಡ್ ಶಿಖರದಲ್ಲಿ 7,000 ಮೀಟರ್ ಎತ್ತರದಲ್ಲಿ ಗುರುವಾರ ಮುಂಜಾನೆ 9 ಗಂಟೆಗೆ ಹಿಮಪಾತ ಸಂಭವಿಸಿದೆ. ಈ ವೇಳೆ ಪುರ್ಜಾ ಸೇರಿದಂತೆ ನೇಪಾಳದ ಐದು ಹಾಗೂ ವಿದೇಶಗಳ ಐದು ಮಂದಿ ಕಾಣೆಯಾಗಿದ್ದಾರೆ.
ನಿರ್ಮಲ್ ಅವರು, ಪ್ರಪಂಚದಲ್ಲಿರುವ 8,000 ಮೀಟರ್ ಹಾಗೂ ಅದಕ್ಕಿಂತ ಎತ್ತರದ ಎಲ್ಲಾ 14 ಶಿಖರಗಳನ್ನು 189 ದಿನಗಳಲ್ಲಿ ಆರೋಹಣ ಮಾಡಿದ್ದಾರೆ.

