HEALTH TIPS

ಸಾವಿರಾರು ವಲಸಿಗರನ್ನು ವಾಪಸ್‌ ಕಳುಹಿಸಿದ ಸ್ಪೇನ್; ಸಹಜ ಸ್ಥಿತಿಯತ್ತ ಸ್ಯೂಟ ನಗರ

ಸ್ನೀಡೆಕ್ , ಸ್ಯೂಟ (ಸ್ಪೇನ್): ಸ್ಪೇನ್‌ಗೆ ಹೊಂದಿಕೊಂಡಿರುವ ಸ್ವಾಯತ್ತ ಪ್ರದೇಶ ಸ್ಯೂಟ ನಗರವನ್ನು ಪ್ರವೇಶಿಸಿದ್ದ ಸಾವಿರಾರು ವಲಸಿಗರು ಮೊರೊಕ್ಕೊದ ಸ್ನೀಡೆಕ್‌ಗೆ ವಾಪಸಾಗುತ್ತಿದ್ದು, ಸ್ಯೂಟ ನಗರವು ಸಹಜ ಸ್ಥಿತಿಗೆ ಮರಳಿದೆ.

'ವಲಸಿಗರನ್ನು ಬಸ್ ಅಥವಾ ರೈಲುಗಳ ಮೂಲಕ ನೇರವಾಗಿ ಅವರ ತವರಿಗೆ ಕಳುಹಿಸಲಾಗುವುದು. 


ಕೆಲವೇ ದಿನಗಳಲ್ಲಿ ಸ್ಯೂಟ ನಗರವನ್ನು ಪ್ರವೇಶಿಸಿದ್ದ 60 ಸಾವಿರ ವಲಸಿಗರ ಪೈಕಿ ಕನಿಷ್ಠ 48 ಸಾವಿರ ಜನರು ಈವರೆಗೆ ಮೊರೊಕ್ಕೊಗೆ ವಾಪಸಾಗಿದ್ದಾರೆ. ಸ್ನೀಡೆಕ್ ಗಡಿ ಹಾಗೂ ಗುಡ್ಡ ಪ್ರದೇಶವು ಸಂಪೂರ್ಣ ಸುರಕ್ಷಿತವಾಗಿದೆ' ಎಂದು ಸ್ಪೇನ್ ಸರ್ಕಾರವು ಮಾಹಿತಿ ನೀಡಿದೆ.

ಮೊರೊಕ್ಕೊ ತೊರೆದು, ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ಯುರೋಪ್ ರಾಷ್ಟ್ರಗಳನ್ನು ಪ್ರವೇಶಿಸುವ ಕನಸು ಹೊತ್ತು ಸಾವಿರಾರು ಜನರು ಸ್ಯೂಟ ನಗರದತ್ತ ಬಂದಿದ್ದರು. ಮೊರೊಕ್ಕೊದೊಂದಿಗೂ ಗಡಿ ಹಂಚಿಕೊಂಡ ಸ್ಯೂಟ ಪ್ರದೇಶದಲ್ಲಿ ವಲಸಿಗರು, ಭದ್ರತಾ ಸಿಬ್ಬಂದಿ ಮೇಲೆ ಶುಕ್ರವಾರ ಕಲ್ಲು ತೂರಾಟ ನಡೆಸಿದ್ದರಿಂದ ಸಂಘರ್ಷ ಉಂಟಾಗಿತ್ತು.

ಸ್ಯೂಟ ನಗರಕ್ಕೆ ನುಗ್ಗುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಹಾಗೂ ಇತರ ಅವಘಡಗಳಲ್ಲಿ ಒಟ್ಟು 67 ವಲಸಿಗರು ಮೃತಪಟ್ಟಿದ್ದಾರೆ.

ಸ್ಪೇನ್ ಪ್ರವೇಶಿಸುವ ಹಂಬಲದಲ್ಲಿ ಸಮುದ್ರದಲ್ಲಿ ಈಜಿಕೊಂಡು, ಸ್ಯೂಟವನ್ನು ದಾಟುವ ಜಾಗದ ವರೆಗೆ ಕಿರಿದಾದ ಗೋಡೆಯ ಗುಂಟ ನಡೆದುಕೊಂಡು ಬಂದ ವಲಸಿಗರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಶುಕ್ರವಾರ ರಾತ್ರಿಯವರೆಗೂ ಸಂಘರ್ಷ ಮುಂದುವರಿದಿತ್ತು. ವಲಸಿಗರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿಗಳು ಮತ್ತು ಅಶ್ರುವಾಯು ಶೆಲ್‌ ಬಳಸಿದರು. ಅನೇಕರನ್ನು ವಶಕ್ಕೆ ಪಡೆದರು.

ಬದುಕಲೆಂದೇ ವಲಸೆ: 'ಆಫ್ರಿಕಾದಲ್ಲಿ ನಿರೀಕ್ಷೆಯಷ್ಟು ಅವಕಾಶಗಳಿಲ್ಲ. ಹೀಗಾಗಿ ನಾವು ಯುರೋಪ್ ರಾಷ್ಟ್ರಗಳಿಗೆ ತೆರಳಿ, ಅಲ್ಲಿಯೇ ಕೆಲಸ ಮಾಡುತ್ತ ಬದುಕು ಕಟ್ಟಿಕೊಳ್ಳಲು ಬಯಸುತ್ತೇವೆ' ಎಂದು ವಲಸೆ ಬಂದ 19 ವರ್ಷದ ಯುವಕ ಹೇಳಿದ.

'ನಮ್ಮನ್ನು ವಾಪಸ್ ಕರೆದುಕೊಂಡು ಹೋಗಲು ಬಸ್‌ಗಳು ಬಂದಿವೆ ಎಂಬುದನ್ನು ತಿಳಿದುಕೊಂಡಿದ್ದೇನೆ. ನನಗೆ ನನ್ನ ಮಕ್ಕಳನ್ನು ನೋಡಿದರೆ ಸಾಕಾಗಿದೆ. ವಲಸೆ ಬಂದಿದ್ದಕ್ಕೆ ಬೇಸರವಿದೆ' ಎಂದು ಸ್ನೀಡೆಕ್‌ನಿಂದ 170 ಕಿ.ಮೀ. ದೂರದ ಕ್ಸಾರ್ ಎಲ್ ಕೆಬಿರ್ ಪ್ರದೇಶದಿಂದ ಬಂದಿದ್ದ 32 ವರ್ಷದ ವ್ಯಕ್ತಿಯೊಬ್ಬರು ವಿಷಾದದಿಂದ ನುಡಿದರು.

ಒಪ್ಪಂದ ಅಮಾನತು:

ವೀಸಾ ಮುಕ್ತ ಪ್ರವೇಶಕ್ಕಾಗಿ ಸ್ಪೇನ್ ಜೊತೆಗೆ ಹೊಂದಿರುವ ಒಪ್ಪಂದವನ್ನು ಒಂದು ತಿಂಗಳ ಮಟ್ಟಿಗೆ ಇಟಲಿ ಅಮಾನತು ಮಾಡಿದೆ. ಯುರೋಪ್‌ನ ಅನೇಕ ದೇಶಗಳು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ವಲಸಿಗರ ಅಕ್ರಮ ಪ್ರವೇಶ ತಡೆಯುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿವೆ. ಆದರೆ 'ಇದು ಸ್ವಾರ್ಥದ ನಡೆ' ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಟೀಕಿಸಿದ್ದಾರೆ. ಅನಿಯಂತ್ರಿತ ಗಡಿ ದಾಟುವಿಕೆಯನ್ನು ತಡೆಯಲು ಹಾಗೂ ತ್ವರಿತವಾಗಿ ಜಂಟಿ ಕಾರ್ಯಾಚರಣೆ ಕೈಗೊಳ್ಳಲು ಆಂತರಿಕ ಸಚಿವಾಲಯಗಳು ತುರ್ತಾಗಿ ವಿಡಿಯೊ ಸಭೆ ಸೇರುವಂತೆ ಐರೋಪ್ಯ ಒಕ್ಕೂಟದ 22 ರಾಷ್ಟ್ರಗಳು ಶನಿವಾರ ಪತ್ರವನ್ನು ಹೊರಡಿಸಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries