HEALTH TIPS

ಕೊಲಂಬಿಯಾದಲ್ಲಿ ಪ್ರಬಲ ಭೂಕಂಪ: 132 ಸಾವು, 570 ಮಂದಿಗೆ ಗಾಯ

ಬೊಗೊಟಾ: ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದುರಂತದಲ್ಲಿ 132 ಮಂದಿ ಮೃತಪಟ್ಟಿದ್ದು, 570 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಿಕ್ಟರ್ ಮಾಪಕದಲ್ಲಿ 7.4ರಷ್ಟು ಭೂಕಂಪದ ತೀವ್ರತೆ ದಾಖಲಾಗಿದ್ದು, ಅನೇಕ ಕಟ್ಟಡಗಳು ನೆಲಕ್ಕುರುಳಿವೆ. 


ಕಟ್ಟಡಗಳ ಅವಶೇಷಗಳ ಅಡಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ತುರ್ತು ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪೆರೇರಾ ನಗರದಲ್ಲಿ 60 ಮಂದಿ ಸಾವಿಗೀಡಾಗಿದ್ದಾರೆ. ದೇಶದ ಐದು ಪ್ರಮುಖ ನಗರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಏಳು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ರಾಷ್ಟ್ರ ರಾಜಧಾನಿ ಬೊಗೋಟಾ ಸೇರಿದಂತೆ ಕೊಲಂಬಿಯಾದಾದ್ಯಂತ ಹಲವಾರು ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಗಳಿಂದ ಓಡಿ ಬರುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

'1,577 ವಸತಿ ಕಟ್ಟಡಗಳು ಹಾನಿಗೊಳಗಾಗಿದ್ದು, 37 ಕಟ್ಟಡಗಳು ಸಂಪೂರ್ಣ ನಾಶವಾಗಿವೆ. 18 ಆಸ್ಪತ್ರೆ ಮತ್ತು 52 ಶಾಲೆಗಳಿಗೆ ಹಾನಿಯಾಗಿದೆ ಎಂದು ಕೊಲಂಬಿಯಾ ಅಧ್ಯಕ್ಷ ಅಬೆಲಾರ್ಡೊ ಡಿ ಲಾ ಎಸ್ಪ್ರಿಯೆಲ್ಲಾ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಕೊಲಂಬಿಯಾದ ಮೂರನೇ ಅತಿದೊಡ್ಡ ನಗರ ಕಾಲಿಯಲ್ಲಿ 20 ಕಟ್ಟಡಗಳು ಉರುಳಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಮೇಯರ್‌ ಅಲೆಕ್ಸಾಂಡ್ರೊ ಎಡೆರ್‌ ಹೇಳಿದ್ದಾರೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 7.34ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಸ್ಯಾನ್‌ ಹೊಸೆ ಡೆಲ್‌ ಪಾಲ್ಮರ್‌ ಮುನ್ಸಿಪಾಲಿಟಿಯ 100 ಕಿ.ಮೀ. ಆಳದಲ್ಲಿ ಇತ್ತು. ಈ ಪಟ್ಟಣ ರಾಜಧಾನಿ ಬೊಗೊಟಾದಿಂದ ಪಶ್ಚಿಮಕ್ಕೆ 400 ಕಿ.ಮೀ. ದೂರದಲ್ಲಿದೆ.

ನೆರೆಯ ದೇಶಗಳಾದ ಈಕ್ವೆಡಾರ್ ಮತ್ತು ಪನಾಮದಲ್ಲೂ ಕಂಪನದ ಅನುಭವ ಉಂಟಾಗಿದ್ದು, ಅಲ್ಲಿ ಅತ್ಯಲ್ಪ ಹಾನಿ ವರದಿಯಾಗಿದೆ. ಕೊಲಂಬಿಯಾದ ಮತ್ತೊಂದು ನೆರೆಯ ದೇಶ ವೆನೆಜುವೆಲಾದಲ್ಲಿ ಜೂನ್‌ನಲ್ಲಿ ಸಂಭವಿಸಿದ 7.2 ಮತ್ತು 7.5ರಷ್ಟು ತೀವ್ರತೆಯ ಅವಳಿ ಭೂಕಂಪನಗಳಿಂದ 6,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries