ಮಂಜೇಶ್ವರ: ಮೀನು ಮಾರಾಟ ಅಂಗಡಿಯಿಂದ ನಗದು, ಮೀನು ಸೇರಿದಂತೆ ವಿವಿಧ ಸೊತ್ತುಗಳನ್ನು ಕಳವು ನಡೆಸಲಾಗಿದೆ. ತಲಪ್ಪಾಡಿಯಲ್ಲಿರುವ ಮೀನಿನ ಅಂಗಡಿಯಿಂದ ಈ ಕಳವು ನಡೆದಿದ್ದು, ಮೀನುಗಳಿದ್ದ ಎರಡು ಫ್ರೀಸರ್, ಐದು ಫೈಬರ್ ಪೆಟ್ಟಿಗೆಗಳು, ಬಕೆಟ್ ನಲ್ಲಿದ್ದ 5 ಸಾವಿರ ರೂಪಾಯಿ ಹಾಗೂ 4 ಚಾಕುಗಳನ್ನು ಕಳವು ನಡೆಸಲಾಗಿದೆ. ಇದರಿಂದ ಸುಮಾರು 1.40 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿರುವುದಾಗಿ ಅಂಗಡಿ ಪಾಲುದಾರ ಬಂಗ್ರಮಂಜೇಶ್ವರ ಕಡಿಗಾರ್ ಹೌಸ್‍ನ ಮೊಹಮ್ಮದ್ ರಫೀಕ್ (37) ಎಂಬವರು ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆ. 11ರಂದು ರಾತ್ರಿ 11 ಗಂಟೆಯಿಂದ 12ರ ಬೆಳಿಗ್ಗೆ 10ರ ನಡುವೆ ಅಂಗಡಿಯಿಂದ ಕಳವು ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


