ಕಾಸರಗೋಡು: ರೈಲಿನಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ ಯುವಕ, ಬಂಗಳಂ ನಿವಾಸಿ ರತೀಶ್ (42)ಎಂಬಾತನನ್ನು ಕಾಞಂಗಾಡು ಡಿವೈಎಸ್‍ಪಿ ಅನಿಲ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬುಧವಾರ ರಾತ್ರಿ 7.30ಕ್ಕೆ ಪೆÇಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿ ಬೆಮಲಬಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಧಾವಿಸಿ, ವಿವಿಧ ರೀತಿಯ ಪರಿಶೀಲನೆ ನಡೆಸಿತು. ಆದರೆ ಬಾಂಬ್ ಅಥವ ಬೇರೆ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಅನಂತರ ಇದು ಹುಸಿ ಬಾಂಬ್ ಬೆದರಿಕೆ ಸಂದೇಶವೆಂದು ಸಾಬೀತಾಗಿತ್ತು. ಬೆದರಿಕೆ ಕರೆ ಬಂದ ಫೆÇೀನ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿ ಕಾಞಂಗಾಡು ಆಸುಪಾಸು ಇರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿಪೊಲೀಸರು ಕಾರ್ಯಾಚರಣೆ ನಡೆಸಿ, ಮಾವುಂಗಾಲ್ ಮೇಲ್ಸೇತುವೆ ಬಳಿ ಅವಿತು ಕುಳಿತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.


