HEALTH TIPS

2 'ಎಂಕ್ಯೂ-9ಬಿ' ಗುತ್ತಿಗೆ | ಅಮೆರಿಕ ಜೊತೆ ಒಪ್ಪಂದ: ರಕ್ಷಣಾ ಸಚಿವಾಲಯ

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಕಣ್ಗಾವಲು ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮುಂದಾಗಿರುವ ರಕ್ಷಣಾ ಸಚಿವಾಲಯ, ಅಮೆರಿಕದ ಕಂಪನಿಯೊಂದರ ಎರಡು ಮಾನವರಹಿತ ವೈಮಾನಿಕ ವಾಹನ(ಯುಎವಿ)ಗಳಾದ 'ಎಂಕ್ಯೂ-9ಬಿ ಸೀ ಗಾರ್ಡಿಯನ್'ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಿದೆ.


ಈ ಯುದ್ಧವಿಮಾನಗಳನ್ನು ಎರಡೂವರೆ ವರ್ಷ ಅವಧಿಗೆ ಗುತ್ತಿಗೆ ಪಡೆಯಲಾಗುತ್ತಿದ್ದು, ಈ ಸಂಬಂಧ ಜನರಲ್ ಆಟೊಮಿಕ್ಸ್‌ ಏರೊನಾಟಿಕಲ್ ಸಿಸ್ಟಮ್ ಕಂಪನಿಯೊಂದಿಗೆ ₹1,943 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವಾಲಯ ಸೋಮವಾರ ತಿಳಿಸಿದೆ.

ನೌಕಾಪಡೆಯು 2020ರಲ್ಲಿ ಇಂತಹ ಎರಡು ಯುದ್ಧವಿಮಾನಗಳನ್ನು ಗುತ್ತಿಗೆಗೆ ಪಡೆದಿತ್ತು.

50 ಸಾವಿರ ಅಡಿ ಎತ್ತರದಲ್ಲಿ 30-40 ಗಂಟೆಯಷ್ಟು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುವ ಈ ವಿಮಾನಗಳನ್ನು ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಇವು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ, ಸೆನ್ಸರ್‌ಗಳ ಜೊತೆಗೆ, ನಾಲ್ಕು 'ಹೆಲ್‌ಫೈರ್‌' ಕ್ಷಿಪಣಿಗಳು ಹಾಗೂ 450 ಕೆ.ಜಿ ತೂಕದ ಬಾಂಬ್‌ಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿವೆ.

ನೌಕಾಪಡೆ ಸಿಬ್ಬಂದಿಗೆ ತರಬೇತಿ ನೀಡುವುದಕ್ಕೂ ಈ ಯುದ್ಧವಿಮಾನಗಳನ್ನು ಬಳಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries