HEALTH TIPS

ಇ20: ಪ್ರತಿಭಟನನಿರತ ಎಎಪಿ ನಾಯಕರನ್ನು ತಡೆದ ಪೊಲೀಸರು

ನವದೆಹಲಿ: ಇ20 ಯೋಜನೆ ವಿರುದ್ಧ 2.30 ಲಕ್ಷ ಮನವಿಗಳನ್ನು ಪ್ರಧಾನಿ ಮೋದಿ ಅವರಿಗೆ ನೀಡಲು ಅವರ ನಿವಾಸದವರೆಗೆ ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಸೇರಿದಂತೆ ಪಕ್ಷದ 100 ಬೆಂಬಲಿಗರು ಹೊರಟಿದ್ದ ಪ್ರತಿಭಟನಾ ಮೆರವಣಿಗೆಯನ್ನು ದೆಹಲಿ ಪೊಲೀಸರು ಮಂಗಳವಾರ ತಡೆದರು.


ಪ್ರಧಾನಿ ಅವರ ನಿವಾಸದಿಂದ ದೂರದಲ್ಲಿರುವ ಫಿರೋಜ್‌ ಶಾ ರಸ್ತೆಯಲ್ಲಿಯೇ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಬಳಿಕ, ರಸ್ತೆಯಲ್ಲಿಯೇ ಕುಳಿತು ಪಕ್ಷದ ನಾಯಕರು ಮತ್ತು ಬೆಂಬಲಿಗರು ಪ್ರತಿಭಟನೆಯನ್ನು ಮುಂದುವರಿಸಿದರು.

'ಎಥನಾಲ್‌ ಟೌನ್‌ ಹಾಲ್‌' ಸಭೆಯೊಂದರನ್ನು ಇತ್ತೀಚೆಗೆ ಎಎಪಿ ಆಯೋಜಿಸಿತ್ತು. ಇಲ್ಲಿ ಇ20 ವಿರುದ್ಧ ಸಹಿ ಅಭಿಯಾನವನ್ನು ಘೋಷಿಸಿಲಾಗಿತ್ತು. ಈ ಮೂಲಕ ದೇಶದಾದ್ಯಂತ ಸಂಗ್ರಹಿಸಲಾದ 2.30 ಲಕ್ಷ ಮನವಿಗಳನ್ನು ಪ್ರಧಾನಿ ಅವರಿಗೆ ಸಲ್ಲಿಸಲು ಪಕ್ಷ ನಿರ್ಧರಿಸಿತ್ತು.

ಪ್ರತಿಭಟನಾ ಮೆರವಣಿಗೆ ಹೊರಡುವುದಕ್ಕೂ ಮುನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, 'ಇ20 ಇಂಧನದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತಿರುವ ಕೋಟಿಗಟ್ಟಲೆ ವಾಹನ ಮಾಲೀಕರ ಕಳವಳವನ್ನು ಸರ್ಕಾರ ಆಲಿಸಬೇಕು ಎಂಬುದು ನಮ್ಮ ಉದ್ದೇಶ' ಎಂದರು.

ಅನುಮತಿ ನಿರಾಕರಣೆ: ಇ20 ಪೆಟ್ರೋಲ್‌ ಹಿಂಪಡೆಯಲು ಒತ್ತಾಯಿಸಿ ದೆಹಲಿ ಟ್ಯಾಕ್ಸಿ ಮತ್ತು ಟೂರಿಸ್ಟ್‌ ಟ್ರಾನ್ಸ್‌ಪೋಟರ್ಸ್‌ ಮತ್ತು ಟೂರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಸದಸ್ಯರು ರಾಜ್‌ಘಾಟ್‌ಗೆ ತೆರಳಿ ಪ್ರತಿಭಟನೆ ನಡೆಸಿದರು.

'ಸಂಸತ್ತಿನವರೆಗೆ ಮೆರವಣಿಗೆ ಹೋಗಲು ದೆಹಲಿ ಪೊಲೀಸರು ಅವಕಾಶ ನೀಡಲಿಲ್ಲ. ಆದ್ದರಿಂದ ನಾವು ಮಹಾತ್ಮಾ ಗಾಂಧಿ ಅವರಿಗೆ ನಮನ ಸಲ್ಲಿಸಲು ರಾಜ್‌ಘಾಟ್‌ಗೆ ತೆರಳಲು ನಿರ್ಧರಿಸಿದೆವು' ಎಂದು ಸಂಘಟನೆಯ ಅಧ್ಯಕ್ಷ ಸಂಜಯ್‌ ಸಾಮ್ರಾಟ್‌ ತಿಳಿಸಿದರು.


 'ಟ್ರಂಪ್‌ ಗುಲಾಮಗಿರಿ'

ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರ ಒತ್ತಡದ ಕಾರಣಕ್ಕಾಗಿ ಪ್ರಧಾನಿ ಮೋದಿ ಅವರು ಆ ದೇಶದಿಂದ ದೊಡ್ಡ ಪ್ರಮಾಣದ ಎಥನಾಲ್‌ ಖರೀದಿಸುತ್ತಿದ್ದಾರೆ. ಟ್ರಂಪ್‌ ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇವರಿಂದ ನಮ್ಮ ಜನರ ವಾಹನಗಳು ಹಾಳಾಗುತ್ತಿವೆ. ಆದ್ದರಿಂದ ಟ್ರಂಪ್‌ ಅವರ ಒತ್ತಡವನ್ನು ತಡೆದುಕೊಂಡು ಅಮೆರಿಕದಿಂದ ಎಥನಾಲ್‌ ಖರೀದಿಸಬಾರದು 'ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯಿರಿ' ಇ20 ಯೋಜನೆಯಿಂದ ಮುಕ್ತಿ ಪಡೆದುಕೊಳ್ಳಬೇಕು ಎಂದಾದರೆ ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯಬೇಕು. ಗೋವಾ ಮತ್ತು ಗುಜರಾತ್‌ನಲ್ಲಿ ನಮ್ಮ ಶಾಸಕರು ಇದ್ದಾರೆ. ಆ ರಾಜ್ಯಗಳಲ್ಲಿ ಯೋಜನೆ ಜಾರಿಯನ್ನು ವಿಧಾನಸಭೆಗಳಲ್ಲಿ ನಮ್ಮವರು ಪ್ರಬಲವಾಗಿ ವಿರೋಧಿಸಲಿದ್ದಾರೆ ಅರವಿಂದ್‌ ಕೇಜ್ರಿವಾಲ್‌ ಎಎಪಿ ರಾಷ್ಟ್ರೀಯ ಸಂಚಾಲಕ

'ವೈಜ್ಞಾನಿಕವಾಗಿಯೇ ಜಾರಿ'

ಕೇಜ್ರಿವಾಲ್‌ ಅವರು ನಡೆಸುತ್ತಿರುವ ಅಭಿಯಾನವು ಭಾರತದ ರೈತರ ವಿರುದ್ಧ ಇದೆ. ನಮ್ಮ ರೈತರ ಆದಾಯವನ್ನು ಕಡಿಮೆ ಮಾಡಲು ಅವರು ಬಯಸುತ್ತಿದ್ದಾರೆ. ಹಲವು ದೇಶಗಳಲ್ಲಿ ಎಥನಾಲ್‌ ಅನ್ನು ಬಳಸಲಾಗುತ್ತಿದೆ. ನಮ್ಮ ದೇಶದಲ್ಲಿಯೂ ವೈಜ್ಞಾನಿಕವಾಗಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ತರುಣ್‌ ಚುಂಗ್‌ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries