ಕಾಸರಗೋಡು: ಕೋಝಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೆರಿಗೆ ವಾರ್ಡ್‍ಗೆ ಗರ್ಭಿಣಿ ಜೊತೆ ತಲುಪಿದ ಯುವತಿ ಕೈವಶವಿದ್ದ 29ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಘಿದೆ. ವಯನಾಡ್ ಮೇಪಾಡಿ ನಿವಾಸಿ ಹಾಗೂ ಕಾಸರಗೋಡಿನಲ್ಲಿ ವಾಸ್ತವ್ಯ ಹೊಂದಿರುವ ಅಶ್ವತಿ ಎಂಬಾಕೆಯನ್ನು ಮೆಡಿಕಲ್ ಕಾಲೇಜು ಠಾಣೆ ಪೊಲೀಸರುಬಂಧಿಸಿದ್ದಾರೆ.
ಪ್ಯಾರಾಚೂಟ್ ತೆಂಗಿನೆಣ್ಣೆಯ ಸಣ್ಣ ಬಾಟಲಿಯಲ್ಲಿ ಹ್ಯಾಶಿಶ್ ಆಯಿಲ್ ಸಂಗ್ರಹಿಸಿಟ್ಟುಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿಗೆ ಈಕೆ ಮೇಲೆ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪೆÇಲೀಸರಿಗೆ ಮಾಹಿತಿ ನೀಡಲಾಗಿತ್ತು. ನಂತರ ಮೆಡಿಕಲ್ ಕಾಲೇಜು ಪೆÇಲೀಸರು ತಲುಪಿ ನಡೆಸಿದ ತಪಾಸಣೆಯಲ್ಲಿ ಯುವತಿಯನ್ನು ಸೆರೆಹಿಡಿಯಲಾಗಿದೆ.
ಪ್ರಸಕ್ತ ಜೈಲಿನಲ್ಲಿರುವ ಪತಿಗೆ ಹಸ್ತಾಂತರಿಸಲು ಹ್ಯಾಶಿಶ್ ಆಯಿಲ್ ತಂದಿರುವುದಾಗಿ ಯುವತಿ ಪೆÇಲೀಸರಲ್ಲಿ ಹೇಳಿಕೆ ನೀಡಿದ್ದರೂ, ಈಕೆ ಮಾದಕ ದ್ರವ್ಯ ವ್ಯಾಪಾರಿಯಾಗಿರಬೇಕೆಂದು ಸಂಶಯಿಸಲಾಗಿದೆ. ಘಟನೆ ಬಗ್ಗೆ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

