ಮುಳ್ಳೇರಿಯ: ಅಡೂರು ಅಡ್ಯ ಜಾಕೋಟ್ ನಿವಾಸಿ, ಪೇಂಟಿಂಗ್ ಕಾರ್ಮಿಕ ಅಭಿಲಾಷ್ (28)ಅವರ ಮೃತದೇಹ ಮನೆಯ ಬೆಡ್ ರೂಂನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿವಸಗಳಿಂದ ಇವರು ಕೆಲಸಕ್ಕೆ ತೆರಳಿರಲಿಲ್ಲ. ಗುರುವಾರ ಬೆಳಗ್ಗೆ ಬಹಳ ಹೊತ್ತಿನ ವರೆಗೂ ಬೆಡ್ ರೂಂನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮನೆಯವರು ನೋಡಿದಾಗ ಅಭಿಲಾಷ್ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ತಕ್ಷಣ ಇವರನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


