HEALTH TIPS

ಗೂಗಲ್ ಅನಾಲಿಟಿಕ್ಸ್-4: 'ರಿಯಲ್ ಟೈಮ್' ದತ್ತಾಂಶದಲ್ಲಿ ವ್ಯತ್ಯಯ

ಬೆಂಗಳೂರು: ಪ್ರಮುಖ ವೆಬ್ ವಿಶ್ಲೇಷಣಾ ವೇದಿಕೆಯಾದ 'ಗೂಗಲ್ ಅನಾಲಿಟಿಕ್ಸ್ 4' (ಜಿಎ4)ನ ರಿಯಲ್-ಟೈಮ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದ್ದು, ಸಕ್ರಿಯ ಬಳಕೆದಾರರ (Active Users) ಸಂಖ್ಯೆಯಲ್ಲಿ ವ್ಯತ್ಯಾಸ ಉಂಟಾಗಿದೆ.


ವೆಬ್‌ಸೈಟ್‌ಗಳಿಗೆ ಏಕಕಾಲದಲ್ಲಿ ಭೇಟಿ ನೀಡುತ್ತಿರುವ ವೀಕ್ಷಕರ ಸಂಖ್ಯೆಯನ್ನು ಲೆಕ್ಕ ಮಾಡುವಲ್ಲಿ ಜಿಎ4 ಸರ್ವರ್ ವಿಫಲವಾಗಿದ್ದು ನೈಜ ಸಂಖ್ಯೆಗಿಂತ ತೀರಾ ಕಡಿಮೆ ಅಥವಾ ಶೂನ್ಯ ಸಂಖ್ಯೆಯನ್ನು ತೋರಿಸುತ್ತಿದೆ ಎಂದು ಹಲವು ತಾಂತ್ರಿಕ ಬಳಕೆದಾರರು ದೂರಿದ್ದಾರೆ.

ತಾಂತ್ರಿಕ ವಿಶ್ಲೇಷಕರ ಪ್ರಕಾರ, ಗೂಗಲ್‌ನ ಆಂತರಿಕ ಡೇಟಾ ಪ್ರೊಸೆಸಿಂಗ್ ವ್ಯವಸ್ಥೆಯಲ್ಲಿ ಉಂಟಾಗಿರುವ ವಿಳಂಬ, ಜಾಗತಿಕ ಸರ್ವರ್ ವ್ಯತ್ಯಯ ಹಾಗೂ ವೆಬ್‌ಸೈಟ್‌ಗಳ ಗೂಗಲ್ ಟ್ಯಾಗ್ (ಜಿಟಿಐಂ) ವ್ಯವಸ್ಥೆಯಲ್ಲಿನ ಬದಲಾವಣೆಗಳೂ ಈ ರೀತಿಯ ವ್ಯತ್ಯಾಸಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ಕುರಿತು ಗೂಗಲ್ ಅಧಿಕೃತವಾಗಿ ಸ್ಪಷ್ಟನೆ ನೀಡಬೇಕಿದೆ. ಶೀಘ್ರದಲ್ಲೇ ಈ ತಾಂತ್ರಿಕ ದೋಷ ಸರಿಹೋಗುವ ನಿರೀಕ್ಷೆಯಿದೆ ಎಂದು ತಾಂತ್ರಿಕ ತಜ್ಞರು ತಿಳಿಸಿದ್ದಾರೆ.

ಬೆಳಗ್ಗೆ ಕೂಡ ಹಲವು ಕಡೆಗಳಲ್ಲಿ ಪ್ರಸಿದ್ದ ಸಾಮಾಜಿಕ ಜಾಲತಾಣ ವಾಟ್ಸ್‌ಆಯಪ್‌ ಬಳಕೆಯಲ್ಲೂ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಮೂಲಕ ದೂರಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries