HEALTH TIPS

ಇರಾನ್‌ನಿಂದ ಪೆಟ್ರೋಲಿಯಂ ಆಮದು: ಭಾರತ ಮೂಲದ 4 ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್‌ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡ ಕಾರಣಕ್ಕಾಗಿ ಭಾರತ ಮೂಲದ ನಾಲ್ಕು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.


ಇರಾನ್‌ನ ಎಲ್ಲ ಆರ್ಥಿಕ ಮೂಲಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ನಿರ್ಬಂಧಗಳೂ ಸೇರಿದಂತೆ 'ಆರ್ಥಿಕ ಬಹಿಷ್ಕಾರ ಕಾರ್ಯಾಚರಣೆ'ಯನ್ನು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಸೋಮವಾರ ಘೋಷಿಸಿದ್ದಾರೆ.

ಅಲ್ಲದೆ, ಇರಾನ್ ಜೊತೆಗಿನ ಆರ್ಥಿಕ ವ್ಯವಹಾರವನ್ನು ಮುಂದುವರಿಸುವ ದೇಶಗಳು ಪ್ರತೀಕಾರದ ಕ್ರಮಗಳನ್ನು ಎದುರಿಸಲು ಸನ್ನದ್ಧರಾಗಬೇಕು ಎಂದೂ ಎಚ್ಚರಿಸಿದ್ದಾರೆ.

'ಪೊರ್ಟೀಸ್ ಪಾರ್ಟ್‌ನರ್ ಎಲ್‌ಎಲ್‌ಪಿ, ಸದಾಶಿವ ಓವರ್‌ಸೀಸ್ ಲಿಮಿಟೆಡ್, ಪಿಪಿ ಸಾಫ್ಟ್‌ಟೆಕ್ ಪ್ರೈ.ಲಿ., ಪ್ರಕೃತೀಸ್ ಇನ್ಫ್ರಾ ಇಂಪೆಕ್ಸ್ ಪ್ರೈ.ಲಿ. - ಇವು ನಿರ್ಬಂಧಕ್ಕೆ ಒಳಗಾದ ಕಂಪನಿಗಳು. ಈ ಸಂಸ್ಥೆಗಳು ತಿಳಿವಳಿಕೆ ಇದ್ದೂ ವ್ಯವಹಾರಗಳನ್ನು ಮುಂದುವರಿಸಿದ್ದವು' ಎಂದು ಪ್ರಕಣೆಯಲ್ಲಿ ತಿಳಿಸಲಾಗಿದೆ.

'ಇರಾನ್‌ನ ಆರ್ಥಿಕ ಜೀವನಾಡಿಗಳನ್ನು ಕತ್ತರಿಸುವ ಅಭೂತಪೂರ್ವ ಅಭಿಯಾನ ಇದಾಗಿದೆ. ಆ ದೇಶದೊಂದಿಗೆ ವ್ಯವಹರಿಸುವ ರಾಷ್ಟ್ರಗಳು, ಉದ್ಯಮಗಳು ಮತ್ತು ಸಂಸ್ಥೆಗಳ ಮೇಲಿನ ದ್ವಿತೀಯ ಹಂತದ ನಿರ್ಬಂಧಗಳನ್ನು ವಿಸ್ತರಿಸಲಾಗುತ್ತದೆ' ಎಂದು ಹೇಳಲಾಗಿದೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries