HEALTH TIPS

ಸೈಬರ್ ದಾಳಿ | ಬ್ರಿಟನ್‍ನ ವಿದ್ಯುತ್ ಸ್ಥಾವರ 4 ದಿನ ಸ್ಥಗಿತ: ವರದಿ

ಲಂಡನ್: ಸೈಬರ್ ದಾಳಿಯ ಪರಿಣಾಮ ಬ್ರಿಟನ್‍ನ ವಿದ್ಯುತ್ ಸ್ಥಾವರವೊಂದು ಕನಿಷ್ಠ ನಾಲ್ಕು ದಿನಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು. ಈ ದಾಳಿಯು ಇರಾನ್‍ಗೆ ಸಂಬಂಧಿಸಿದೆ ಎಂದು ಪ್ರತಿಪಾದಿಸಲಾಗಿದೆ.


ಅಮೆರಿಕದ ನೀರು ಪೂರೈಕೆ ವ್ಯವಸ್ಥೆಗಳ ಮೇಲೆ ಸರಣಿ ದಾಳಿಗಳು ನಡೆದ ಸಮಯದಲ್ಲಿಯೇ ಈ ವಿದ್ಯುತ್ ಸ್ಥಾವರದ ಮೇಲೆಯೂ ಹ್ಯಾಕಿಂಗ್ ನಡೆದಿದೆ.

ಭದ್ರತಾ ಕಾಳಜಿಯ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ವಿದ್ಯುತ್ ಸ್ಥಾವರದ ಹೆಸರನ್ನು ಬಹಿರಂಗಪಡಿಸಿಲ್ಲ. ಸೈಬರ್ ದಾಳಿಗೆ ಒಳಗಾದ ಸ್ಥಾವರವು ಚಿಕ್ಕದಾಗಿದ್ದು, ಬ್ರಿಟನ್‍ನ ವ್ಯಾಪಕ ವಿದ್ಯುತ್ ಮತ್ತು ಇಂಧನ ಪೂರೈಕೆಯ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂದು ಬಿಬಿಸಿ ಮತ್ತು `ಟೆಲಿಗ್ರಾಫ್' ವರದಿ ಮಾಡಿದೆ.

ಇರಾನ್ ಅನ್ನು ದೀರ್ಘಕಾಲದಿಂದ ಸಮರ್ಥ ಸೈಬರ್ ಶಕ್ತಿ ಎಂದು ಪರಿಗಣಿಸಲಾಗಿದೆ. ಅಮೆರಿಕ ಜೊತೆಗಿನ ಸಂಘರ್ಷ ಪ್ರಾರಂಭವಾದಂದಿನಿಂದ, ಪಾಶ್ಚಿಮಾತ್ಯ ಸೈಬರ್-ಸೆಕ್ಯೂರಿಟಿ ಕ್ಷೇತ್ರವು ಇರಾನ್‍ನಿಂದ ನಡೆಯಬಹುದಾದ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದೆ. ಜರ್ಮನಿ, ಫಿನ್‍ಲ್ಯಾಂಡ್, ಪೋಲೆಂಡ್, ಬೆಲ್ಜಿಯಂ ಮತ್ತು ಅಲ್ಬೇನಿಯಾಗಳಲ್ಲಿಯೂ ಇಂತಹ ಶಂಕಿತ ದಾಳಿಗಳು ವರದಿಯಾಗಿವೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries