ತಿರುವನಂತಪುರಂ: ರಾಜ್ಯದಲ್ಲಿ ಓಣಂ ಸಮಯದಲ್ಲಿ ಮದ್ಯ ಮಾರಾಟದಲ್ಲಿ ದಾಖಲೆ ನಿರ್ಮಾಣವಾಗಿದೆ. ಕಳೆದ ಆರು ದಿನಗಳಲ್ಲಿ ಮಾತ್ರ ಮದ್ಯ ಮಾರಾಟದಲ್ಲಿ ಭಾರಿ ಏರಿಕೆ ದಾಖಲಾಗಿದೆ.
ಕಳೆದ ಕೆಲವು ದಿನಗಳಲ್ಲಿ, ಬೆವ್ಕೊದಲ್ಲಿ 512.11 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 460.8 ಕೋಟಿ ರೂ.ಗಳಷ್ಟಿತ್ತು ಎಂದು ಅಂಕಿ ಅಂಶಗಳು ತೋರಿಸುತ್ತವೆ.
ನಿನ್ನೆಯವರೆಗಿನ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯ ಮಾರಾಟ ಸುಮಾರು 52 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಇಂದು ಮತ್ತು ಉತ್ರಾಡಂ ದಿನವಾದ ನಾಳೆ ಮದ್ಯ ಮಾರಾಟ ಹೆಚ್ಚಾಗಲಿದೆ ಎಂದು ಬೆವ್ಕೊ ಅಂದಾಜಿಸಿದೆ. ಕಳೆದ ಶನಿವಾರ ಮಾತ್ರ 102 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ದಾಖಲಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ 279.12 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಮಾದಕ ವಸ್ತು ಮಾಫಿಯಾವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಆರಂಭಿಸಿರುವ 'ಆಪರೇಷನ್ ತೂಫಾನ್' ಬಳಿಕ, ಮಾದಕ ವಸ್ತು ಖರೀದಿಸಲು ಸಾಧ್ಯವಾಗದವರು ಮದ್ಯದ ಮೊರೆ ಹೋಗುತ್ತಿದ್ದಾರೆ ಎಂಬುದಕ್ಕೆ ಹೆಚ್ಚುತ್ತಿರುವ ಮದ್ಯ ಮಾರಾಟವೇ ಸಾಕ್ಷಿ ಎಂದು ಪೋಲೀಸರು ತೀರ್ಮಾನಿಸಿದ್ದಾರೆ.

