HEALTH TIPS

ಪ್ರಧಾನಿ ಮೋದಿ ಭಾಷಣದಲ್ಲಿ 'ಸಪ್ತಧಾರೆ': ಭಾರತದ ಬೆಳವಣಿಗೆಯ 7 ಪ್ರಮುಖ ಶಕ್ತಿಗಳು

ನವದೆಹಲಿ: ಭಾರತದ ಮುಂದಿನ ಹಂತದ ಬೆಳವಣಿಗೆಗೆ ಶಕ್ತಿ ತುಂಬಲಿರುವ ಏಳು ಪ್ರಮುಖ ಸಾಮರ್ಥ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಸಪ್ತಧಾರೆ' ಎಂದು ಬಣ್ಣಿಸಿದ್ದಾರೆ. 


ಈ ಏಳು ಶಕ್ತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಾರತವನ್ನು ಆತ್ಮನಿರ್ಭರ ಹಾಗೂ ವಿಕಸಿತ ದೇಶವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಉತ್ಪಾದನೆ, ರೈತರು, ತಂತ್ರಜ್ಞಾನ, ಗತಿ ಶಕ್ತಿ, ರಕ್ಷಣಾ ಶಕ್ತಿ, ಹಸಿರು ಇಂಧನ ಹಾಗೂ ಸಾಫ್ಟ್ ಪವರ್ ಇವು ಭಾರತದ 'ಸಪ್ತಧಾರೆ'ಗಳು ಎಂದು ಪ್ರಧಾನಿ ಮೋದಿ ವಿವರಿಸಿದರು.

1. ಉತ್ಪಾದನಾ ವಲಯ...

ಉತ್ಪಾದನೆ ರಂಗಕ್ಕೆ ಬೃಹತ್ ಉತ್ತೇಜನ ನೀಡಲು ಕರೆ ನೀಡಿದ ಪ್ರಧಾನಿ, ಇದನ್ನು ಭಾರತದ ಭವಿಷ್ಯದ ಬೆಳವಣಿಗೆಯ ಎಂಜಿನ್ ಬಣ್ಣಿಸಿದರು. ನಮಗೆ ಬಿಡಿಭಾಗಗಳು (ಕಾಂಪೊನೆಂಟ್‌ಗಳು) ಮತ್ತು ಸಂಪೂರ್ಣ ಉತ್ಪಾದನೆಯ ಅಗತ್ಯವಿದೆ ಎಂದರು. ಜಾಗತಿಕ ಪೂರೈಕೆ ಸರಪಳಿಗೆ ಭಾರತವನ್ನು ಪ್ರಮುಖ ಕೇಂದ್ರವನ್ನಾಗಿ ಮಾಡಲು ಕರೆ ನೀಡಿದರು. ಉತ್ಪಾದನಾ ವಲಯದ ಉದ್ಯಮಿಗಳಿಗೆ ಮನವಿ ಮಾಡಿದ ಪ್ರಧಾನಿ, ವೆಚ್ಚ, ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂದರು.

2. ರೈತರು...

ಕೃಷಿ ಮತ್ತು ಆಹಾರ ಸಂಸ್ಕರಣಾ ವಲಯವನ್ನು 'ಸಪ್ತಧಾರೆ'ಯ ಎರಡನೇ ಶಕ್ತಿ ಎಂದು ಕರೆದರು. ವಿಶ್ವದ ಮಾರುಕಟ್ಟೆಗಳು ಈಗ ನಮ್ಮ ರೈತರಿಗೆ ಮುಕ್ತವಾಗಿವೆ, ಸ್ವತಂತ್ರ ವ್ಯಾಪಾರ ಒಪ್ಪಂದಗಳಿಂದಾಗಿ (ಎಫ್‌ಟಿಎ) ನಮಗೆ ಬೃಹತ್ ಮಾರುಕಟ್ಟೆಯ ಅವಕಾಶ ಸಿಗುತ್ತಿದ್ದು, ಅದನ್ನು ನಾವು ತಲುಪಬೇಕು. ನಮ್ಮ ಪಾರಂಪರಿಕ ಆಹಾರ, ಸಿರಿಧಾನ್ಯಗಳು, ಸಾಂಬಾರ ಪದಾರ್ಥಗಳು ಹಾಗೂ ಹಣ್ಣು-ತರಕಾರಿಗಳು ಜಾಗತಿಕ ಬ್ರ್ಯಾಂಡ್ ಉದ್ಯಮಗಳಾಗಬೇಕು ಎಂದರು.

3. ತಂತ್ರಜ್ಞಾನ...

ಮೂರನೇ ಪ್ರಮುಖ ವಲಯ ತಂತ್ರಜ್ಞಾನ ಮತ್ತು ನಾವೀನ್ಯತೆ. ಇದು ಡೇಟಾ ಸೆಂಟರ್, ರೊಬೊಟಿಕ್ಸ್ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಯುಗ. ಹೀಗಾಗಿ ಭಾರತವೇ ಈ ತಂತ್ರಜ್ಞಾನಗಳ ಪ್ರಮುಖ ಕೇಂದ್ರವಾಗಬೇಕು. ಯುಪಿಐ ಮೂಲಕ ನಾವು ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇವೆ. ಈಗ ಭಾರತದಲ್ಲೇ ತಯಾರಿಸಿದ 6ಜಿ ತಂತ್ರಜ್ಞಾನ ದೇಶದಾದ್ಯಂತ ತಲುಪುವಂತೆ ಮಾಡುವುದು ನಮ್ಮ ಗುರಿಯಾಗಬೇಕು. ಯುಪಿಐ ಮತ್ತು ಡಿಜಿಟಲ್ ಯಶಸ್ಸಿನ ನಂತರ, ಮುಂದಿನ ಪೀಳಿಗೆಯ ಸಂಪರ್ಕ ತಂತ್ರಜ್ಞಾನದಲ್ಲಿ ನಾವು ಜಿಗಿತ ಕಾಣಬೇಕಿದೆ ಎಂದರು.

4. ಗತಿ ಶಕ್ತಿ...

ದೇಶದಾದ್ಯಂತ ಸಂಪರ್ಕ ಜಾಲಕ್ಕೆ ಒತ್ತು ನೀಡಲಾಗುವುದು ಎಂದು ಪ್ರಧಾನಿ ಹೇಳಿದರು. ವ್ಯಾಪಾರ-ವಹಿವಾಟಿಗೆ ವೇಗ ನೀಡಲು ಹೊಸ ರಸ್ತೆಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದರು.

5. ರಕ್ಷಣಾ ಶಕ್ತಿ...

ರಕ್ಷಣಾ ವಲಯ ಕೂಡ 'ಸಪ್ತಧಾರೆ'ಯ ಭಾಗವಾಗಿದೆ. ರಕ್ಷಣಾ ಉಪಕರಣಗಳ ಉತ್ಪಾದನೆ ಮತ್ತು ಸ್ವಾವಲಂಬನೆಯತ್ತ ಭಾರತ ಶ್ರಮಿಸಬೇಕಿದೆ ಎಂದರು. ವಿಶೇಷವಾಗಿ ಡ್ರೋನ್ ತಂತ್ರಜ್ಞಾನವನ್ನು ಉಲ್ಲೇಖಿಸಿದ ಅವರು, ಭಾರತವು ಡ್ರೋನ್ ಮತ್ತು ಡ್ರೋನ್ ನಿರೋಧಕ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ ಎಂದರು.

6. ಹಸಿರು ಇಂಧನ...

ಹಸಿರು ಇಂಧನವನ್ನು ಆರನೇ ಶಕ್ತಿ ಎಂದು ಬಣ್ಣಿಸಿದ ಪ್ರಧಾನಮಂತ್ರಿಗಳು, ಈ ವಲಯದಲ್ಲಿ ದೊಡ್ಡ ಮಟ್ಟದ ನಾವೀನ್ಯತೆ ಹಾಗೂ ಸಂಶೋಧನೆಗಳು ನಡೆಯಬೇಕಿದೆ ಎಂದು ಹೇಳಿದರು.

7. ಸಾಫ್ಟ್ ಪವರ್...

ಭಾರತದ 'ಸಾಫ್ಟ್ ಪವರ್' ಏಳನೇ ಶಕ್ತಿಯಾಗಿದೆ ಎಂದ ಪ್ರಧಾನಿ ಮೋದಿ, ಯೋಗ, ಕರಕುಶಲ ವಸ್ತುಗಳು, ಚಲನಚಿತ್ರಗಳು, ಅನಿಮೇಷನ್, ಗೇಮಿಂಗ್, ಡಿಜಿಟಲ್ ಕಂಟೆಂಟ್ ಹಾಗೂ ಸೃಜನಶೀಲ ರಂಗಗಳನ್ನು ಇದಕ್ಕೆ ಉದಾಹರಣೆಯಾಗಿವೆ ಎಂದರು.

ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವ ಅಪಾರ ಸಾಮರ್ಥ್ಯ ಭಾರತಕ್ಕಿದ್ದು, ಈ ಕ್ಷೇತ್ರದಲ್ಲಿ ದೇಶ ಇನ್ನಷ್ಟು ಕೆಲಸ ಮಾಡಬೇಕಿದೆ. ಪ್ರವಾಸಿಗರನ್ನು ಸೆಳೆಯಲು ಭಾರತದಲ್ಲಿ ಹಲವು ರಾಷ್ಟ್ರೀಯ ಉದ್ಯಾನವನಗಳು ಹಾಗೂ ಹಲವು ಪ್ರವಾಸಿ ತಾಣಗಳಿವೆ ಎಂದು ಅವರು ಉಲ್ಲೇಖಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries