HEALTH TIPS

ರಾಜಸ್ಥಾನ ಬಿಜೆಪಿ ಕಚೇರಿಯಲ್ಲಿ 'ವಂದೇ ಮಾತರಂ' ಬದಲು ಬೇರೆ ಸಂಗೀತ ಪ್ರಸಾರ

ಜೈಪುರ: ಬಿಜೆಪಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 'ವಂದೇ ಮಾತರಂ'ಗೆ ಬದಲಾಗಿ ಬೇರೆ ಸಂಗೀತ ಪ್ರಸಾರವಾಗಿದೆ. ಘಟನೆ ಕುರಿತು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್‌ ರಾಥೋಡ್‌ ಕ್ಷಮೆ ಕೋರಿದ್ದಾರೆ.


ಜೈಪುರದ ಬಡಿ ಚೌಪಾರ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮದನ್‌ ರಾಥೋಡ್‌ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಬಳಿಕ ಪೂರ್ಣ 'ವಂದೇ ಮಾತರಂ' ಪ್ರಸಾರ ಮಾಡಲು ಸಿದ್ಧತೆ ಮಾಡಲಾಗಿತ್ತು.

ಆದರೆ ಧ್ವನಿವರ್ಧಕ ವ್ಯವಸ್ಥೆಯಲ್ಲಿ ಮೂಲ ಸಂಗೀತದ ಬದಲು ಬೇರೆ ಸಂಗೀತ ಸಂಯೋಜನೆಯೊಂದಿಗೆ 'ವಂದೇ ಮಾತರಂ' ಪ್ರಸಾರವಾಯಿತು. ಕಾರ್ಯಕ್ರಮದಲ್ಲಿದ್ದ ಆಯೋಜಕರು ತಕ್ಷಣ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದರೂ, ಫಲ ಕೊಡಲಿಲ್ಲ.

ಈ ಕಾರ್ಯಕ್ರಮದಲ್ಲಿ ಜೈಪುರ ಸಂಸದೆ ಮಂಜು ಶರ್ಮಾ, ಶಾಸಕ ಬಾಲಮುಕುಂದ್‌ ಆಚಾರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಮದನ್‌ ರಾಥೋಡ್‌, ಇದು ಕಾರ್ಯಕ್ರಮದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ತಂಡದಿಂದ ಆದ ತಾಂತ್ರಿಕ ಮತ್ತು ಮಾನವೀಯ ದೋಷ ಎಂದು ಹೇಳಿದ್ದಾರೆ. 'ಇದು ಆಗಬಾರದ ಘಟನೆ. ಈ ತಪ್ಪಿಗಾಗಿ ಕ್ಷಮೆಯಾಚಿಸುತ್ತೇನೆ' ಎಂದು ಅವರು ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries