ರಾಂಚಿ: ಜನವರಿಯಿಂದ 103 ನಕ್ಸಲರನ್ನು ಬಂಧಿಸಲಾಗಿದ್ದು, 46 ಮಂದಿ ಶರಣಾಗಿದ್ದಾರೆ. 22 ನಕ್ಸಲರನ್ನು ಪೊಲೀಸ್ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ ಎಂದು ಜಾರ್ಖಂಡ್ ಡಿಜಿಪಿ ತದಾಶಾ ಮಿಶ್ರಾ ಶನಿವಾರ ತಿಳಿಸಿದ್ದಾರೆ.
ರಾಜ್ಯದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ದೇಶದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಜಾರ್ಖಂಡ್ ಪೊಲೀಸರು ನಕ್ಸಲ್‌ವಾದ ಒಡ್ಡಿದ್ದ ಸವಾಲನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಿದ್ದಾರೆ' ಎಂದು ಹೇಳಿದ್ದಾರೆ.
ಈ ಅವಧಿಯಲ್ಲಿ 98 ಶಸ್ತ್ರಾಸ್ತ್ರಗಳು, 7,470 ಕಾರ್ಟ್ರಿಡ್ಜ್‌ಗಳು, 11 ಕೆ.ಜಿ. ಸ್ಫೋಟಕಗಳು, ಮೂರು ಬಾಂಬ್‌ಗಳು ಮತ್ತು ಸುಲಿಗೆ ಮಾಡಿರುವ ₹6 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

