HEALTH TIPS

ನೇಪಾಳ ಪ್ರವಾಹ | ಈಶಾ ಫೌಂಡೇಶನ್‌ನ 80 ಮಂದಿ ನಾಪತ್ತೆ: ಸದ್ಗುರು ಜಗ್ಗಿ ವಾಸುದೇವ್

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಈಶಾ ಫೌಂಡೇಶನ್‌ನ 80 ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ತಿಳಿಸಿದ್ದಾರೆ. 


‌ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ನಮ್ಮವರು ಇದ್ದ 'ಕೈಲಾಶ' ಗುಂಪು ಕೂಡ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದೆ.

ಈ ಗುಂಪಿನಲ್ಲಿದ್ದವರ ಪೈಕಿ 80 ಸದಸ್ಯರು ನಾಪತ್ತೆಯಾಗಿದ್ದಾರೆ. ಅವರು ವಲಸೆ ಕಚೇರಿಯಿಂದ ಮರಳುವಾಗ ಈ ಅವಘಡ ಸಂಭವಿಸಿದೆ. 495 ಜನರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಹೇಳಿದ್ದಾರೆ.

ನಾಪತ್ತೆಯಾಗಿರುವವರ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಯಲ್ಲಿ ಎಲ್ಲ ಸ್ವಯಂ ಸೇವಕರು ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.

'ಎಷ್ಟೇ ಅಪಾಯವಿದ್ದರೂ ಸರಿ, ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿ ರಕ್ಷಣಾ ಕೆಲಸದಲ್ಲಿ ಭಾಗಿಯಾಗಲು ನಾವು ಸಿದ್ಧರಿದ್ದೇವೆ. ನಮ್ಮ ಒಟ್ಟು 21 ತಂಡಗಳಲ್ಲಿ, 495 ಜನರು ಈಗಾಗಲೇ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ಪ್ರಸ್ತುತ 743 ಮಂದಿ ಟಿಬೆಟ್‌ನಲ್ಲಿದ್ದರೆ, 148 ಜನ ನೇಪಾಳದಲ್ಲಿದ್ದಾರೆ. ಹಾಗೆಯೇ ನೇಪಾಳದ ತಿಮುರೆಯಲ್ಲಿ 3 ಮೂವರು ಸ್ವಯಂ ಸೇವಕರಿದ್ದಾರೆ' ಎಂದೂ ಅವರು ಮಾಹಿತಿ ನೀಡಿದ್ದಾರೆ.


A terrible and tragic flash flood has taken place at Gyirong in Tibet - China, and one of our Kailash groups was caught in it. While on their way back, they were at the immigration office when the flood occurred and the building and much of the town seems to have been flooded. Show more









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries