HEALTH TIPS

9 ರಂದು ಕಾಸರಗೋಡಿನಲ್ಲಿ 'ಪಿ.ಆರ್.ತಿಪ್ಪೇಸ್ವಾಮಿ ಕಲಾಪ್ರಶಸ್ತಿ ಪ್ರದಾನ-2026' ಸಮಾರಂಭ

ಕಾಸರಗೋಡು: ಪಿ ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ (ರಿ.), ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾಹಿತ್ಯಕ-ಸಾಂಸ್ಕೃತಿಕ-ಸಾಮಾಜಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ 'ಪಿ.ಆರ್.ತಿಪ್ಪೇಸ್ವಾಮಿ ಕಲಾಪ್ರಶಸ್ತಿ ಪ್ರದಾನ-2026'ಸಮಾರಂಭ ಆ. 9ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ತಾಳಿಪಡ್ಪು ಉಡುಪಿ ಗಾರ್ಡನ್ಸ್‍ನಲ್ಲಿ ಜರುಗಲಿದೆ.


ಖ್ಯಾತ ಚಿತ್ರ ಕಲಾವಿದ ಪಿ.ಎಸ್ ಪುಣಿಂಚಿತ್ತಾಯ ಸಮಾರಂಭ ಉದ್ಘಾಟಿಸುವರು. 

ಪಿ.ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ ಅಧ್ಯಕ್ಷ ಡಾ. ರಾಜಶೇಖರ ಕದಂಬ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಆರೋಗ್ಯ ಖಾತೆ ಸಚಿವ ಯು.ಟಿ ಖಾದರ್ ಅವರು ಪಿ.ಆರ್ ತಿಪ್ಪೇಸ್ವಾಮಿ ಕಲಾಪ್ರಶಸ್ತಿ ಪ್ರದಾನ ಮಾಡುವರು. ರಂಗಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಅವರು ಪಿಆರ್‍ಟಿ ಭಾವಶಿಲ್ಪಕ್ಕೆ ಪುಷ್ಪಾರ್ಚನೆ ನಡೆಸುವರು.

ಈ ಸಂದರ್ಭ ಹಿರಿಯ ಚಿತ್ರ ಕಲಾವಿದ, ವಿಜಯಪುರ ನಗರದ ಮಲ್ಲಪ್ಪ ಸಿದ್ದಪ್ಪ ಹಳ್ಳಿ ಹಾಗೂ ಹಿರಿಯ ಕೋಲಾಟ ಕಲಾವಿದ, ಜಾನಪದ ಹಾಡುಗಾರ ಚಿತ್ರದುರ್ಗದ ನರಸಪ್ಪ ಅವರಿಗೆ ಪಿಆರ್‍ಟಿ ಕಲಾ ಪ್ರಶಸ್ತಿ ಹಾಗೂ ಜಾನಪದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಪ್ರಾಚಾರ್ಯ ಬಿ.ಪಿ ಮೋಹನ ಕುಮಾರ್, ಮಾಹಿತಿ ಹಕ್ಕು ಇಲಾಖೆ ಆಯುಕ್ತ ರುದ್ರಣ್ಣ ಹರ್ತಿಕೋಟಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ಮಾನಸ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಸಮಿತಿ ಅಧ್ಯಕ್ಷ ವಕೀಲ ಮುರಳೀಧರ ಬಳ್ಳಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಸಂಕಬೈಲ್ ಸತೀಶ್ ಅಡಪ, ಮಂಗಳೂರಿನ ಮಹಾಲಸಾ ಸ್ಕೂಲ್ ಆರ್ಟ್ ಉಪನ್ಯಾಸಕ ಎನ್. ಎಸ್ ಪತ್ತಾರ್, ಕಲಾವಿದ ಕೆ.ಟಿ ನಾಗರಾಜು, ಮಾಜಿ ನಗರಸಭಾ ಸದಸ್ಯ ಎಸ್.ಜೆ ಪ್ರಸಾದ್, ಡಾ.ಕೆ.ಕೆ ಶ್ಯಾನುಭಾಗ್, ಸವಿತಾ ಐ. ಭಟ್, ಪ್ರೊ. ಪಿ.ಎನ್ ಮೂಡಿತ್ತಾಯ, ವಕೀಲ ಎ.ಎನ್ ಅಶೋಕ್ ಕುಮಾರ್, ಅರಿವಳಿಕೆ ತಜ್ಞ ಮೇಜರ್ ಡಾ. ಸಂತೋಷ್ ಕಾಮತ್, ಪ್ರವೀಣ್ ಪುಣಿಂಚಿತ್ತಾಯ ಕಾಸರಗೋಡು, ಕಲಾವಿದ ಸದೆಯ ಕುಂಆರ್ ಪಾಲ್ಗೊಳ್ಳುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries