HEALTH TIPS

ಆರ್ಥಿಕ ಯುದ್ಧ ಮುಂದುವರೆಸಿದರೆ ಪರ್ಷಿಯನ್ ಕೊಲ್ಲಿಯಿಂದ ಒಂದು ಹನಿ ತೈಲವೂ ಹೊರ ಹೋಗದು: ಇರಾನ್ ಬೆದರಿಕೆ

 ಟೆಹರಾನ್ : ಅಮೆರಿಕವು ಇರಾನ್ ವಿರುದ್ಧದ ತನ್ನ ಆರ್ಥಿಕ ಯುದ್ಧವನ್ನು ಮುಂದುವರಿಸಿದರೆ, ಪರ್ಷಿಯನ್ ಕೊಲ್ಲಿಯಿಂದ ಒಂದೇ ಒಂದು ಹನಿ ತೈಲ ರಫ್ತು ಮಾಡಲು ಬಿಡುವುದಿಲ್ಲ ಎಂದು ಇರಾನ್ ರವಿವಾರ ಎಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಹಾನಿಕಾರಕ ಆರ್ಥಿಕ ದಿಗ್ಬಂಧನವನ್ನು ಘೋಷಿಸಿದ ಹಾಗೂ ಟೆಹರಾನ್ ಜೊತೆ ವ್ಯಾಪಾರ ನಡೆಸುವ ದೇಶಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ನಂತರ ಇರಾನ್ ಈ ಹೇಳಿಕೆ ನೀಡಿದೆ.

'ಒಂದು ವೇಳೆ ಆರ್ಥಿಕ ಯುದ್ಧ ಮುಂದುವರಿದರೆ, ಹಾರ್ಮುಝ್ ಜಲಸಂಧಿಯ ಮೂಲಕವಾಗಲಿ ಅಥವಾ ಪರ್ಷಿಯನ್ ಕೊಲ್ಲಿಯ ಯಾವುದೇ ಭಾಗದಿಂದಾಗಲಿ ಒಂದೇ ಒಂದು ಹನಿ ತೈಲ ರಫ್ತಾಗುವುದಿಲ್ಲ'' ಎಂದು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮುಹ್ಸಿನ್ ರೆಝಾಯಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

''ಇರಾನ್ ಜನರ ವಿರುದ್ಧ ಅಮೆರಿಕ ನಡೆಸುತ್ತಿರುವ ಆರ್ಥಿಕ ಯುದ್ಧದಲ್ಲಿ ಯಾವುದೇ ದೇಶ ಭಾಗವಹಿಸಿದರೆ ಅಥವಾ ಬೆಂಬಲಿಸಿದರೆ, ಅದನ್ನು ಯುದ್ಧದ ಕೃತ್ಯವೆಂದು ಇರಾನ್ ಪರಿಗಣಿಸಲಿದೆ'' ಎಂಬುದಾಗಿಯೂ ಅವರು ಎಚ್ಚರಿಸಿದ್ದಾರೆ.


ಆರ್ಥಿಕ ಯುದ್ಧ ಮುಂದುವರೆಸಿದರೆ ಪರ್ಷಿಯನ್ ಕೊಲ್ಲಿಯಿಂದ ಒಂದು ಹನಿ ತೈಲವೂ ಹೊರ ಹೋಗದು: ಇರಾನ್ ಬೆದರಿಕೆ





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries