HEALTH TIPS

ಮೋದಿ ಭಾಷಣ ಬೆನ್ನಲ್ಲೇ 'ದಿಮಾಗಿ ನಕ್ಸಲ್ ಜನತಾ ಪಾರ್ಟಿ' ಇನ್‌ಸ್ಟಾಗ್ರಾಮ್ ಖಾತೆ

ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ 'ದಿಮಾಗಿ ನಕ್ಸಲ್‌' (ಬೌದ್ಧಿಕ ನಕ್ಸಲ್) ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಇನ್‌ಸ್ಟಾಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ 'ದಿಮಾಗಿ ನಕ್ಸಲ್ ಜನತಾ ಪಾರ್ಟಿ' ಎಂಬ ಹೆಸರಿನ ಹೊಸ ಖಾತೆ ಕಾಣಿಸಿಕೊಂಡಿದೆ. 


ಇನ್‌ಸ್ಟಾಗ್ರಾಮ್ ಖಾತೆಗೆ 1.25 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಸಂಸ್ಥಾಪಕ 'ಬೌದ್ಧಿಕ ಭಾರತೀಯ' ಎಂದು ಖಾತೆಯ ಬಯೊದಲ್ಲಿ ಬರೆದುಕೊಂಡಿದೆ. 'ಎಕ್ಸ್'ನಲ್ಲಿ ಆರು ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

'ಪ್ರಶ್ನಿಸಿ, ಕುರುಡಾಗಿ ಹಿಂಬಾಲಿಸಬೇಡಿ'

ಈ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ 'ಪ್ರಶ್ನಿಸಿ. ಯೋಚಿಸಿ. ಕುರುಡಾಗಿ ಅನುಸರಿಸಬೇಡಿ' ಎಂಬ ಘೋಷಣೆ ಇದೆ.

ಪೋಸ್ಟರ್‌ನಲ್ಲಿ 'ನಾವು ದೇಶದ ವಿರುದ್ಧವಲ್ಲ. ಅಜ್ಞಾನ, ಅನ್ಯಾಯ ಮತ್ತು ಕುರುಡು ವಿಧೇಯತೆಯ ವಿರುದ್ಧ' ಎಂದು ಹೇಳಿಕೊಂಡಿದೆ. 'ನಮ್ಮ ಆಯುಧ ಮನಸ್ಸು, ನಮ್ಮ ಕ್ರಾಂತಿ ಆಲೋಚನೆಗಳದ್ದು' ಎಂಬ ಸಂದೇಶವವೂ ಇದೆ.

'ಮೊದಲು ಯೋಚಿಸಿ', 'ಸತ್ಯಾಂಶಗಳಿಗೆ ಆದ್ಯತೆ', 'ಸಂವಿಧಾನ ಮೊದಲು', 'ಭಿನ್ನಾಭಿಪ್ರಾಯವೇ ಪ್ರಜಾಪ್ರಭುತ್ವ', 'ದ್ವೇಷದ ರಾಜಕೀಯ ಬೇಡ', 'ಶಿಕ್ಷಣದಿಂದ ಸಬಲೀಕರಣ', 'ಯುವಕರಿಗೆ ಅವಕಾಶ', 'ಮೂಢನಂಬಿಕೆಗಿಂತ ವಿಜ್ಞಾನ', 'ಪಾರದರ್ಶಕತೆ ಮತ್ತು ಹೊಣೆಗಾರಿಕೆ' ಹಾಗೂ 'ಅಧಿಕಾರಕ್ಕಿಂತ ಜನರು' ಎಂಬ ಹತ್ತು ಅಂಶಗಳನ್ನು ಪಟ್ಟಿ ಮಾಡಲಾಗಿದೆ.

ಅದೇ ಪೋಸ್ಟರ್‌ನಲ್ಲಿ 'ಎಲ್ಲವನ್ನೂ ಪ್ರಶ್ನಿಸಿ, ಆಳವಾಗಿ ಯೋಚಿಸಿ, ನರಂತರ ಸಂಶೋಧನೆ ಮಾಡಿ, ಮುಕ್ತವಾಗಿ ಚರ್ಚಿಸಿ ಬುದ್ಧಿವಂತಿಕೆಯಿಂದ ನಿರ್ಧರಿಸಿ, ನಿರ್ಭೀತವಾಗಿ ಬದಲಾಗಿ' ಎಂಬ ಕಾರ್ಯವಿಧಾನವನ್ನೂ ಉಲ್ಲೇಖಿಸಲಾಗಿದೆ. ಕೊನೆಯಲ್ಲಿ 'ಬುದ್ಧಿ ಬಳಸಿ, ಪ್ರಶ್ನಿಸಿ' ಹಾಗೂ 'ದಿಮಾಗಿ ನಕ್ಸಲ್‌ - ದಿ ರೆವಲ್ಯೂಷನ್‌ ಆಫ್‌ ಐಡಿಯಾಸ್‌' ಎಂಬ ಘೋಷಣೆಗಳಿವೆ.

ಖಾತೆಯ ಹಿಂದೆ ಇರುವ ವ್ಯಕ್ತಿಗಳು, ಸಂಘಟನೆಯ ಅಧಿಕೃತ ಸ್ವರೂಪ ಇನ್ನಷ್ಟೇ ಗೊತ್ತಾಗಬೇಕಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries