ಮಧೂರು: ಮಧೂರು ಸನಿಹದ ಪ್ರಗತಿ ವಿಶೇಷ ವಿಕಲಚೇತನ ಶಾಲೆಯಲ್ಲಿ ಓಣಂ ಹಬ್ಬವನ್ನು ವೈವಿದ್ಯ ಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಮತ್ತು ರಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಎನ್ ರಾಮ ಶೆಟ್ಟಿ ಸಿರಿಬಾಗಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಗತಿ ಶಾಲಾ ಟ್ರಸ್ಟಿನ ಉಪಾಧ್ಯಕ್ಷ ಅಶೋಕ ರೈ ಎಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯಾಧಿಕಾರಿ ಡಾ ವಿಜಯಕುಮಾರ್ ಟಿ ಕೆ ಓಣಂ ನ ಮಹತ್ವವನ್ನು ವಿವರಿಸಿದರು. ಸಾಹಿತಿ ಸುಂದರ ಬಾರಡ್ಕ, ನಿವೃತ್ತ ಪೆÇಲೀಸ್ ಅಧಿಕಾರಿ ಪರಮೇಶ್ವರ ನಾಯಕ್ ,ಕಮಲಾಕ್ಷ ಕೆ, ಶ್ವೇತಾ ವಿನ್ಸೆಂಟ್, ಸುಭಾಷ್ ಪೆರ್ಲ, ವನಜಾಕ್ಷಿ, ನಿರ್ಮಲಾ, ಚಂದ್ರ ಕಲಾ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಆನಂದನ್ , ಅನಿಲ್ ಕುಮಾರ್, ರಾಧ ಬಹುಮಾನ ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್ ಸ್ವಾಗತಿಸಿದರು. ಭವ್ಯಶ್ರೀ ಮತ್ತು ಅಶ್ವತಿ ಕಾರ್ಯಕ್ರಮ ನಿರೂಪಿಸಿದರು. ಚಿತ್ರಾ ವಂದಿಸಿದರು.


