ಬದಿಯಡ್ಕ: ಶಾಲೆಗೆ ನಡೆದುಹೋಗುತ್ತಿದ್ದ 13ರ ಹರೆಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಳ್ಳತ್ತಡ್ಕ ಬಳಿಯ ಬನತ್ತಡಿ ಸನಿಹದ ನಿವಾಸಿ ರಮೇಶ (43)ಎಂಬಾಥನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎರಡು ದಿವಸಗಳ ಹಿಂದೆ ಘಟನೆ ನಡೆದಿದ್ದು, ಶಾಲೆಗೆ ಒಂಟಿಯಾಗಿ ನಡೆದುಹೋಗುತ್ತಿದ್ದ ಬಾಲಕಿಯನ್ನು ಆರೋಪಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದರು. ವಿವಿಧ ಸ್ಥಳಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ ಪೆÇಲೀಸರು, ಈ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ. ಬದಿಯಡ್ಕ ಎಸ್‍ಐ ಸುನಿಲ್ ಕುಮಾರ್ ನೇತೃತ್ವದ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

