HEALTH TIPS

ಯುವಕನ ಕೊಲೆ-ವಿದೇಶಕ್ಕೆ ಪರಾರಿಯಾಗಲೆತ್ನಿಸಿದ ಆರೋಪಿ ಬಂಧನ

ಮಂಜೇಶ್ವರ: ಪೋಲೀಸರು ಬಂಧಿಸಿದ್ದ ಯುವಕನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದು ಬಳಿಕ ಆತನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಜತ್ತೂರು ಕಣ್ಣತೀರ್ಥ ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಸಿನಾನ್ (26) ಎಂಬಾತನನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.  ಈಬಗ್ಗೆ  ಬೆಂಗಳೂರು ವಿಮಾನ ನಿಲ್ದಾಣದ ಎಮಿಗ್ರೇಷನ್ ವಿಭಾಗದ ಅಧಿಕಾರಿಗಳು ಮಂಜೇಶ್ವರ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮೀಯಪದವು ಬಳಿಯ ಮದಂಗಲ್ಲು ನಿವಾಸಿ ಮೊಯ್ದೀನ್ ಆರಿಫ್ (22)ಎಂಬವರನ್ನು ಕೊಲೆಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಈ  ಬಂಧನ ನಡೆದಿದೆ.  2024 ಮಾರ್ಚ್ 3ರಂದು ರಾತ್ರಿ ಗಲಾಟೆ ನಡೆಸಿದ ಆರೋಪದಂತೆ ಮಂಜೇಶ್ವರ ಪೆÇಲೀಸರು ಮೊಯ್ದೀನ್ ಆರಿಫ್‍ನನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಇವರ ಸಂಬಂಧಿಕನೊಬ್ಬ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಮನೆಗೆ ಕರೆದೊಯ್ದಿದ್ದರು. ನಂತರ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ನಂತರ ನಡೆಸಿದ ತನಿಖೆಯಿಂದ ಇದೊಂದು ವ್ಯವಸ್ಥಿತ ಕೊಲೆ ಎಂದು ಸಾಬೀತಾಗಿದ್ದು, ಶೌಕತ್ ಆಲಿ, ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ರಶೀದ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿಒಟ್ಟುಒಂಬತ್ತು ಮಂದಿ ಆರೋಪಿಗಳಿದ್ದು, ಉಳಿದ ಆರೋಪಿಗಳಿಗಾಗಿ ಲುಕೌಟ್ ನೋಟೀಸು ಜರಿಗೊಳಿಸುತ್ತಿದ್ದಂತೆ ಅಬ್ದುಲ್ ರಹಿಮಾನ್ ಸಿನಾನ್‍ನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries