ಕಾಸರಗೋಡು: ರೈಲು ಪ್ರಯಾಣದ ವೇಳೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯ ಲ್ಯಾಪ್‍ಟಾಪ್ ಒಳಗೊಂಡ ಬ್ಯಾಗ್ ಕಳವು ಮಾಡಿದ ಪ್ರಕರಣದ ಆರೋಪಿ ತೃಕ್ಕರಿಪ್ಪುರು ಪಡನ್ನ ನಿವಾಸಿ ಸುಧಾಕರನ್ (56)ಎಂಬಾತನನ್ನು ಆರ್‍ಪಿಎಫ್ ಮತ್ತು ರೈಲ್ವೆ ಪೆÇಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಫರೋಕ್‍ನಿಂದ ಕಾಸರಗೋಡಿಗೆ ಏರ್ನಾಡ್ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ, ಬಾಯಾರು ಬಳ್ಕೂರು ನಿವಾಸಿ ಇಬ್ರಾಹಿಂ ಇಹ್ಸಾನ್ ಎಂಬವರ 80,000 ರೂ. ಮೌಲ್ಯದ ಲ್ಯಾಪ್‍ಟಾಪ್ ಒಳಗೊಂಡ ಬ್ಯಾಗ್ ಕಳವಾಗಿತ್ತು. ಬುಧವಾರ ಮಧ್ಯಾಹ್ನ 2.30ರ ವೇಳೆಗೆ ರೈಲು ಕಣ್ಣೂರು ರೈಲು ನಿಲ್ದಾಣ ತಲುಪಿದಾಗ ಕಳವು ಅರಿವಿಗೆಬಂದಿತ್ತು.
ವಿದ್ಯಾರ್ಥಿಯ ದೂರಿನನ್ವಯ ರೈಲ್ವೆ ಪೆÇಲೀಸರು ಮತ್ತು ಆರ್‍ಪಿಎಫ್ ತನಿಖೆ ನಡೆಸಿ, ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಲಾಗಿದೆ. ಕಳವು ಮಾಡಿದ್ದ ಲ್ಯಾಪ್‍ಟಾಪ್ ಸೇರಿದಂತೆ ವಸ್ತುಗಳನ್ನು ಆರೋಪಿಯಿಂದ ಪೋಲೀಸರು ವಶಪಡಿಸಿಕೊಂಡಿದ್ದಾರೆ.


