HEALTH TIPS

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ-ಅಪರಾಧಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ದಂಡ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ ಶಿಕ್ಷಕಗೆ ಕಾಸರಗೋಡು ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ಕೆ. ಸಂತೋಷ್ ಕುಮಾರ್ ವಿವಿಧ ಸೆಕ್ಷನ್‍ಗಳಲ್ಲಾಗಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 70ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


ಎನ್‍ಸಿಸಿ ಇನ್‍ಸ್ಟ್ರಕ್ಟರ್ ಹಾಗೂ ಶಿಕ್ಷಕ, ಮೈರೆ ಗ್ರಾಮದ ಬಿಸ್ಮಿಲ್ಲಾ ಮಂಜಿಲ್‍ನ ಇಬ್ರಾಹಿಂ ಎಂ (54)ಶಿಕ್ಷೆಗೊಳಗಾದ ಅಪರಾಧಿ.  ಪೆÇೀಕ್ಸೋ ಆಕ್ಟ್ ಪ್ರಕಾರ ಆರೋಪಿಗೆ 5 ವರ್ಷ ಕಠಿಣ ಸಜೆ ಮತ್ತು 50,000 ರೂ. ದಂಡ ಹಾಗೂ ಜೆ.ಜೆ. ಆಕ್ಟ್ ಪ್ರಕಾರ ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಟ್ಟು ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.

2022 ನವೆಂಬರ್ 22ರಂದು ಸಂಜೆ ಅಪ್ರಾಪ್ತೆಗೆ ಶಾಲೆಯ ಎನ್‍ಸಿಸಿ ಕೊಠಡಿಯೊಳಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕಾಸರಗೋಡು ಮಹಿಳಾ ಪೆÇಲೀಸ್ ಠಾಣೆಯಲ್ಲಿ ಅಪರಾಧಿ  ಅಧ್ಯಾಪಕನ ವಿರುದ್ಧ ಪೆÇೀಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಂದು ಕಾಸರಗೋಡು ಪೆÇಲೀಸ್ ಠಾಣೆಯ ಎಸ್‍ಐ ಆಗಿದ್ದ ವಿಷ್ಣು ಪ್ರಸಾದ್ ಎಂ.ವಿ ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಮಹಿಳಾ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶರಣ್ಯಾ ಎಂ.ವಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪೆÇ್ರಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರ್ರೊಸಿಕ್ಯೂಟರ್ ಪ್ರಿಯಾ ಎ.ಕೆ. ನ್ಯಾಯಾಲಯದಲ್ಲಿ ವಾದಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries