ಕುಂಬಳೆ: ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಹಾಗೂ ಮಂಗಳೂರು ಪ್ರಸಾದ ನೇತ್ರಾಲಯದ ನೇತೃತ್ವದಲ್ಲಿ ಉಚಿತ ಕಣ್ಣಿನ ಪರೀಕ್ಷಾ ಶಿಬಿರ ಭಾನುವಾರ ಜರಗಿತು. ಬ್ಯಾಂಕಿನ ಅಧ್ಯಕ್ಷ ಶ್ಯಾಮರಾಜ ದೊಡ್ದಮಾಣಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯೆ ಲಕ್ಷ್ಮಿ ವಿ.ಭಟ್, ಪ್ರಸಾದ್ ನೇತ್ರಾಲಯದ ಡಾ.ಅಲಿಂಡ, ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು. ಕುಮಾರಿ ಶರ ಡಿ.ಎಸ್ ಪ್ರಾರ್ಥನೆ ಹಾಡಿದಳು. ನಿರ್ದೇಶಕ ಶ್ರೀಕೃಷ್ಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಹರಿಣಿ ಜಿ.ಕೆ. ನಾಯಕ್ ವಂದಿಸಿದರು. ಸ್ಥಳೀಯರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

.jpg)
