HEALTH TIPS

ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೃಷಿ ದಿನಾಚರಣೆ, ಸನ್ಮಾನ

ಕಾಸರಗೋಡು: ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಾಟಿನಂ ಜೂಬಿಲಿಯ ಅಂಗವಾಗಿ  ರೈತ ದಿನಾಚರಣೆಯನ್ನು ಆಚರಿಸಲಾಯಿತು. ರೈತ ಮಹಿಳೆ ಹಾಗೂ ವ್ಲಾಗರ್ ಆಗಿರುವ ಶೀನಾಮೋಲ್ ಪಿ. ಎಸ್. ಸಮಾರಂಭ ಉದ್ಘಾಟಿಸಿದರು.


ಈ ಸಂದರ್ಭ ಕೃಷಿ ಕ್ಷೇತ್ರದಲ್ಲಿ ವೈವಿಧ್ಯಮಯ ಸಾಧನೆ ಮಾಡಿದ ರೈತರಾದ ಕರುಣಾಕರನ್ ವಿಸ್ಮಯ, ಸಿ. ಮಾಧವನ್ ನಾಯರ್, ಕೆ. ರಾಘವನ್ ಬೇತ್ತಲಂ, ಎ. ರಾಧಾಕೃಷ್ಣನ್ ನಾಯರ್ ಮತ್ತು ಶಾಲೆಯ ಬಾಲ ಕೃಷಿಕ ರೂಪಿತ್ ಎಂ. ಎಸ್. ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಧ್ಯಕ್ಷ ಸುರೇಶ್ ಪಿ. ವಿ. ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಸಮಿತಿ ಅಧ್ಯಕ್ಷರಾದ ಶೋಭನಾ ಬಾಲಚಂದ್ರನ್, ಜೋಸ್ ಪಾರತ್ತಟ್ಟೇಲ್, ಬಲರಾಮನ್ ನಂಬಿಯಾರ್, ರಾಧಾಕೃಷ್ಣನ್ ನಂಬಿಯಾರ್, ಕೃಷ್ಣನ್ ಮೇಲತ್, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಸಾವಿತ್ರಿ, ಜಾನ್ ಕೆ. ಎ., ಕಾರ್ಯಕ್ರಮ ಸಮಿತಿ ಸಂಚಾಲಕಿ ವಸಂತಕುಮಾರಿ ಟಿ. ಕೆ. ಮತ್ತು ರಾಧಾಕೃಷ್ಣನ್ ಎ. ಕೆ. ಉಪಸ್ಥಿತರಿದ್ದರು.  ಕರುಣಾಕರನ್ ವಿಸ್ಮಯ, ಸಿ. ಮಾಧವನ್ ನಾಯರ್, ರಾಘವನ್ ಬೇತ್ತಲಂ ಹಾಗೂ ರಾಧಾಕೃಷ್ಣನ್ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.

ಜನರಲ್ ಸಂಚಾಲಕಿ, ಶಾಲಾ ಪ್ರಾಂಶುಪಾಲೆ ರೇಖಾ ದಾಸ್ ಕೆ. ಪಿ. ಸ್ವಾಗತಿಸಿದರು.  ಸಿಬ್ಬಂದಿ ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ಕೆ. ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries