HEALTH TIPS

ಸಿಬಿಎಸ್‌ಇ ಪೋರ್ಟಲ್‌ ಮತ್ತೆ ತೆರೆಯಲು ನಿರ್ದೇಶನ ನೀಡಲ್ಲ

ನವದೆಹಲಿ (PTI): ವೆಬ್‌ಸೈಟ್‌ ಕ್ರ್ಯಾಶ್‌ ಆಗಿದ್ದರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅನನುಕೂಲವಾಯಿತು. ಜತೆಗೆ, ಮೌಲ್ಯಮಾಪನವನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಪೋರ್ಟಲ್‌ ಅನ್ನು ಮತ್ತೊಮ್ಮೆ ತೆರೆಯಲು ಸಿಬಿಎಸ್‌ಇಗೆ ನಿರ್ದೇಶನ ನೀಡುವಂತೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಳ್ಳಿ ಹಾಕಿದೆ. 


'ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠವು, 'ಪೋರ್ಟಲ್‌ ಅನ್ನು ಮತ್ತೊಮ್ಮೆ ತೆರೆಯುವಂತೆ ಅನುಮತಿ ನೀಡಲು ಸಾಧ್ಯವಿಲ್ಲ. ಪೋರ್ಟಲ್‌ ತೆರೆಯಲು ಅನುಮತಿ ನೀಡಿದರೆ, ಹೊಸ ಹೊಸ ಆರೋಪಗಳು ಆರಂಭವಾಗುತ್ತವೆ' ಎಂದಿತು.

'ಒಂದು ವಾರ ಪೋರ್ಟಲ್‌ ತೆರೆಯಲು ನಿರ್ದೇಶನ ನೀಡಿ. ವೆಬ್‌ಸೈಟ್‌ ಕ್ರ್ಯಾಶ್‌ ಆಗಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಕೆಲವು ಉತ್ತರ ಪತ್ರಿಕೆಗಳನ್ನುಸ್ಕ್ಯಾನ್‌ ಮಾಡಿಯೇ ಇಲ್ಲ. ಸ್ಕ್ಯಾನ್‌ ಮಾಡಲಾದ ಕೆಲವು ಉತ್ತರ ಪತ್ರಿಕೆಗಳು ಮಸುಕಾಗಿವೆ. ಉತ್ತರ ಪತ್ರಿಕೆಗಳ ಕೆಲವು ಪುಟಗಳನ್ನು ಮೌಲ್ಯಮಾಪನ ಮಾಡಿಯೇ ಇಲ್ಲ' ಎಂದು ಅರ್ಜಿದಾರರ ಪರ ವಕೀಲ ವಾದಿಸಿದರು.

'ನಿರ್ದಿಷ್ಟ ಸಮಯದವರೆಗೆ ಪೋರ್ಟಲ್‌ ಬಳಕೆಗೆ ಲಭ್ಯವಿತ್ತು. ಆಗ ಅದರ ಲಾಭ ಪಡೆಯದೆ ಆಮೇಲೆ ಅಲವತ್ತುಕೊಂಡರೆ ಪ್ರಯೋಜನವೇನು?' ಎಂದು ಸಿಜೆಐ ಅಭಿಪ್ರಾಯಪಟ್ಟರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries