ತಿರುವನಂತಪುರಂ: ಸಚಿವಾಲಯದ ಮುಂದೆ ವಿವಿಧ ಬೇಡಿಕೆಗಳನ್ನು ಮಂಡಿಸಿ ಕಲಾ ಮತ್ತು ಕ್ರೀಡಾ ಶಿಕ್ಷಕರು ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯೊಂದಿಗೆ ನಡೆದ ಯಶಸ್ವಿ ಚರ್ಚೆಯ ನಂತರ ಮುಷ್ಕರ ನಿರತರು ಮುಷ್ಕರವನ್ನು ಕೊನೆಗೊಳಿಸಲು ನಿರ್ಧರಿಸಿದರು.
ಶಿಕ್ಷಕರು ಮಂಡಿಸಿದ್ದ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಭರವಸೆ ನೀಡಿತು. ಬಳಿಕ ಸರ್ಕಾರದ ಭರವಸೆಯಿಂದ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿ ಶಿಕ್ಷಕರು ಮುಷ್ಕರವನ್ನು ಅಂತ್ಯಗೊಳಿಸಿದರು.

