HEALTH TIPS

ನಾಡಿನ ಸೌಹಾರ್ದತೆಗೆ ಓಣಂ ಹಬ್ಬ ದಾರಿದೀಪವಾಗಲಿ- ಸೋಮಶೇಖರ ಜೆ.ಎಸ್.

ಪೆರ್ಲ: ಕೇರಳದ ನಾಡಹಬ್ಬ ಓಣಂ ಆಚರಣೆ ಸಮಾಜದಲ್ಲಿ ಸೌಹಾರ್ದತೆಯನ್ನು ಪೋಷಿಸುತ್ತದೆ. ಎಲ್ಲರೂ ಒಟ್ಟುಗೂಡಿ ಆಚರಿಸಿದಾಗ ಶಾಂತಿ ಸಂತೋಷದ ವಾತಾವರಣ ಪಸರಿಸುತ್ತದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ್ ಜೆ.ಎಸ್. ಅಭಿಪ್ರಾಯ ಪಟ್ಟರು. 


ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯ ಮತ್ತು ಊರವರ ಸಹಕಾರದಿಂದ ನಡೆದ ಓಣಂ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಯÁಗಿ ಭಾಗವಹಿಸಿದ್ದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಪ್ರೇಮ ಎಸ್. ರೈ ಮಾತನಾಡಿದರು. ನಲ್ಕ ವಾರ್ಡ್ ಸದಸ್ಯ ಜಗದೀಶ್ ಕುಲಾಲ್ ಶುಭಾಶಂಶನೆ ಗೈದರು. ಊರಿನ ಹಿರಿಯ ನಾಗರಿಕರಾದ ಐತ ಬನಾರಿ ಹಾಗೂ ಮಮ್ಮುಂಞ ನಲ್ಕರನ್ನು ಸನ್ಮಾನಿಸಲಾಯಿತು. ಲೈಬ್ರರಿ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ವೇತಾ ಸ್ವಾಗತಿಸಿ, ಲೈಬ್ರೆರಿಯನ್ ಸುಷ್ಮಾ ವಂದಿಸಿದರು. ಶಿಕ್ಷಕ ಕಮಲಾಕ್ಷ ನಾಯಕ್ ನಿರೂಪಿಸಿದರು. ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಹೂವಿನ ರಂಗವಲ್ಲಿ, ಓಣಂ ಔತಣ ಏರ್ಪಡಿಸಲಾಯಿತು. ಕಾರ್ಯದರ್ಶಿ ಶಶಿಧರ ಕುಲಾಲ್ ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries