HEALTH TIPS

ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಹಿಳೆಯಿಂದ ರಾಹುಲ್ ಗಾಂಧಿ ವಿರುದ್ಧ ಪೋಸ್ಟ್: ವ್ಯಾಕರಣದ ತಪ್ಪಿಗೆ ಜನರಿಂದ ಕ್ಲಾಸ್‌!

ನವದೆಹಲಿ: ಇಂಗ್ಲಿಷ್ ಸೇರಿದಂತೆ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ವ್ಯಾಕರಣದ ತಪ್ಪಿಗಾಗಿ ಟೀಕೆಗೆ ಗುರಿಯಾಗಿದೆ. 


ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ತಮ್ಮನ್ನು ಪರಿಚಯಿಸಿಕೊಂಡಿರುವ ಅರ್ಪಿತಾ ಚಟರ್ಜಿ, ನಾನು ಇಂಗ್ಲಿಷ್‌ ಸೇರಿದಂತೆ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದೇನೆ. ಈಗ ಪಿಎಚ್‌ಡಿ ಮಾಡುತ್ತಿದ್ದೇನೆ ಎಂದು ರಾಹುಲ್ ಗಾಂಧಿಯ "ಅಂಧಭಕ್ತ" ಹೇಳಿಕೆಯನ್ನು ಪ್ರಶ್ನಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

"ಪ್ರಿಯ ರಾಹುಲ್ ಗಾಂಧಿ, ನಾನು ಹೆಮ್ಮೆಯ ಅಂಧಭಕ್ತೆ ಹಾಗೂ ಸಹಾಯಕ ಪ್ರಾಧ್ಯಾಪಕಿ. ನಾನು ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದೇನೆ. ಬಿ.ಎಡ್ ಪದವಿಯನ್ನೂ ಪಡೆದಿದ್ದೇನೆ ಮತ್ತು ಪ್ರಸ್ತುತ ಪಿಎಚ್‌ಡಿ ಮಾಡುತ್ತಿದ್ದೇನೆ. ನಿಮ್ಮ ಪ್ರಕಾರ, ಅಂಧಭಕ್ತ ಎಂದರೆ ಒಬ್ಬ ಮೂರ್ಖ (IDIOT). ಹಾಗಾದರೆ ನಾನು ಮೂರ್ಖಳೇ? ನೀವು ಖಚಿತವಾಗಿ ಹೇಳುತ್ತೀರಾ?" ಎಂದು ಎಕ್ಸ್ ಪೋಸ್ಟ್‌ನಲ್ಲಿ ಅರ್ಪಿತಾ ಚಟರ್ಜಿ ಪ್ರಶ್ನಿಸಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಚಟರ್ಜಿ ಅವರು ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ವಿಷಯಕ್ಕಿಂತ, ಅವರ ಪೋಸ್ಟ್‌ನಲ್ಲಿದ್ದ ವ್ಯಾಕರಣದ ತಪ್ಪುಗಳತ್ತ ಹೆಚ್ಚು ಗಮನ ಹರಿಸಿದರು. ಇಂಗ್ಲಿಷ್ ಸೇರಿದಂತೆ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರೂ, ಅವರ ಪೋಸ್ಟ್‌ನಲ್ಲಿ ಹಲವು ವ್ಯಾಕರಣ ದೋಷಗಳಿವೆ ಎಂದು ಕೆಲವರು ಹೇಳಿದ್ದಾರೆ.

ಕೆಲವರು ಅವರ ಪೋಸ್ಟ್‌ನ ಕೆಲವು ಭಾಗಗಳನ್ನು ಮರುಬರೆದು ತೋರಿಸಿದ್ದಾರೆ. "having two master's degree" ಎಂಬ ಪದಗುಚ್ಛವನ್ನು "having two master's degrees" ಎಂದು ಬರೆಯಬೇಕಿತ್ತು ಹಾಗೂ "pursuing PhD" ಬದಲಿಗೆ "pursuing a PhD" ಎಂದು ಬರೆಯಬೇಕಿತ್ತು ಎಂದು ಹೇಳಿದ್ದಾರೆ.

ಇದಲ್ಲದೆ, ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು ಇಂತಹ ತಪ್ಪುಗಳನ್ನು ಮಾಡುತ್ತಿರುವುದು ವಿಪರ್ಯಾಸ ಎಂದು ಕೆಲವರು ಈ ಪೋಸ್ಟ್‌ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries