HEALTH TIPS

ಖಾರದ ಪುಡಿ ಎರಚಿ ದಂಪತಿಯ ದರೋಡೆ-ಆರೋಪಿ ಬಂಧನ

ಕಾಸರಗೋಡು: ವನೆ ಬಾಡಿಗೆಗೆ ಪಡೆಯುವ ಸೋಗಿಲ್ಲಿ ತಲುಪಿ,  ದಂಪತಿಯ ಕಣ್ಣಿಗೆ ಖಾರದಪುಡಿಯೆರಚಿ ಹಲ್ಲೆಗೈದ ಬಳಿಕ 12 ಪವನ್ ಚಿನ್ನಾಭರಣ ಹಾಗೂ 5ಸಾವಿರ ರೂ. ನಗದು ದರೋಡೆಗೆದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡ್ ಮಾವುಂಗಾಲ್ ಆನಂದಾಶ್ರಮ ಬಳಿಯ ಏಚಿಕಾನ ನಿವಾಸಿ ರಾಜ್‍ಮೋಹನ್ (42) ಎಂಬಾತನನ್ನು ಆಲಪ್ಪುಳ ಸೌತ್ ಠಾಣೆ ಪೊಲೀಸರುಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.  


ಕಳೆದ ಸೋಮವಾರ ಮಧ್ಯಾಹ್ನ ಆಲಪ್ಪುಳ ಬಳಿಯ ಕಡೆಯಾಂಕುಳಂ ಜಂಕ್ಷನ್‍ನ ಕೈದವನ ಕಣಿಯಾಂಕುಳಂ ಅರ್ಪಣದಲ್ಲಿ ವಾಸಿಸುವ ಕೆ.ಆರ್. ಸುದರ್ಶನ್ (70) ಹಾಗೂ ಅವರ ಪತ್ನಿ ರತ್ನಕುಮಾರಿ (65) ಎಂಬವರಿಗೆ ಹಲ್ಲೆಗೈದು 12ಪವನು ಚಿನ್ನಾಭರಣ ದರೋಡೆ ನಡೆಸಲಾಗಿತ್ತು. ದರೋಡೆ ನಡೆದು ತಾಸುಗಳೊಳಗೆ ಆರೋಪಿಯನ್ನು ಆಲಪ್ಪುಳ ಸೌತ್ ಪೆÇಲೀಸರು ವಶಕ್ಕೆ ತೆಗೆದಿದ್ದು, ಈತನಿಂದ ಚಿನ್ನಾಭರಣ ಹಾಗೂ ಹಣ ಪತ್ತೆಹಚ್ಚಿದ್ದಾರೆ. ಆರೋಪಿ ವಿರುದ್ಧ ಇತರ ಪ್ರಕರಣಗಳೂ ದಾಖಲಾಘಿದ್ದು,  ವಾರಣಕುಳಂ ನೋರ್ತ್ ಪೆÇಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ರಿಮಾಂಡ್ ಕಾಲಾವಧಿ ಮುಗಿದು ಎರಡು ವಾರಗಳ ಹಿಂದೆಯಷ್ಟೇ ಆರೋಪಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. 




 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries