ಕಾಸರಗೋಡು: ಕಾಞಂಗಾಡು ಅಲಮಿಪಲ್ಲಿ ಪೆಟ್ರೋಲ್ ಪಂಪ್ ಸನಿಹದ ರಾಜರಾಜೇಶ್ವರಿ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳವಿಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬಲಾಲ್ ಮೂಲದ ಕುಖ್ಯಾತ ಕಳ್ಳ ಹರೀಶ್ ಕುಮಾರ್ (53)ಬಂಧಿತ. ಬುಧವಾರ ನಸುಕಿನ 2ರ ವೇಳೆಗೆ ಸ್ಥಳೀಯ ನಿವಾಸಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದೆ.
ದೇವಸ್ಥಾನದ ಆವರಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಕಳ್ಳನ ಮೇಲೆ ನಿಗಾಯಿರಿಸಿದ್ದ ಸ್ಥಳೀಯರು ಈತನ ಚಲನವಲನವನ್ನು ಸ್ಥಳೀಯರು ತಮ್ಮ ಮೊಬೈಲ್ ಫೆÇೀನ್‍ಗಳಲ್ಲಿ ಸೆರೆಹಿಡಿದಿದ್ದರು ಸಮೀಪದ ಮನೆಯೊಂದರ ಸೌದೆ ಸಂಗ್ರಹಿಸುವ ಸ್ಥಳದಿಂದ ಕೊಡಲಿ ತಂದು, ಆ ಮೂಲಕ ದೇವಾಲಯದ ಬೀಗವನ್ನು ಒಡೆಯಲು ಕಳ್ಳನು ಪ್ರಯತ್ನಿಸಿದ್ದನು. ಈ ಸಂದರ್ಭ ಸ್ಥಳೀಯರು ಕಳ್ಳನನ್ನು ಹಿಡಿದು ಹೊಸದುರ್ಗ ಪೆÇಲೀಸರಿಗೆ ಒಪ್ಪಿಸಿದರು.
ಕೆ.ವಿ. ಪ್ರಶೋಭ್ ಕುಮಾರ್ ಅವರು ನೀಡಿದ ದೂರಿನನ್ವಯ ಹೊಸದುರ್ಗ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ನವೆಂಬರ್‍ನಲ್ಲಿ ರಾಜೇಶ್ವರಿ ಮಠದಿಂದ ತಾಮ್ರದ ಕಾಣಿಕೆ ಹುಂಡಿ, ನಗದು ಮತ್ತು ಬಲಮುರಿ ಶಂಖವನ್ನು ಕಳವು ಮಾಡಿದ ಪ್ರಕರಣವೊಂದರಲ್ಲಿ ಈತ ಆರೋಪಿಯಾಗಿದ್ದಾನೆ, ಅಲ್ಲದೆ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಾದ್ಯಂತ ದೇವಾಲಯಗಳಲ್ಲಿ ನಡೆದ ಹಲವಾರು ಕಳ್ಳತನ ಪ್ರಕರಣಗಳಲ್ಲೂ ಈತ ಶಾಮೀಲಾಗಿರುವ ಬಗ್ಗೆ ಮಾಹಿತಿಯಿದೆ.

